ಕೊಡಗು : 25 ವರ್ಷದ ಹಿಂದೆ ವಿರಾಜಪೇಟೆಯ ಹೆಮ್ಮಾಡು ಭೇತ್ರಿ ಗ್ರಾಮದ ನಂಜಪ್ಪ ಅವರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಕೊನೆಗೂ ಯಶಸ್ವಿಯಾಗಿ ಹಿಡಿದಿದ್ದಾರೆ.
ಕುಂಬಾರರ ನಂಜಪ್ಪ ಹಾಗೂ ಪೂಣಚ್ಚ ಎಂಬ ಇಬ್ಬರು ಸಹೋದರರು 1996 ರಲ್ಲಿ ಯಾವುದೇ ಒಂದು ಕ್ಷುಲ್ಲಕ ಕಾರಣಕ್ಕೆ ಅಂಗಡಿ ಮಾಲೀಕರಾದ ನಂಜಪ್ಪ ಅವರನ್ನು ಕೊಲೆ ಮಾಡಿದ್ದರು.
ಇನ್ನು ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಯಾದ ಪೂಣಚ್ಚ ಎಂಬುವವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.


0 Comments