ರಾಷ್ಟ್ರೀಯ ಹೆದ್ದಾರಿ 73 ಮಂಗಳೂರು, ತುಮಕೂರು ರಸ್ತೆಯ ಕೊಟ್ಟಿಗೆಹಾರ ಮಾರ್ಗದಲ್ಲಿ ಲಘು ಹಾಗು ಘನ ವಾನಗಳಿಗೆ ಅವಕಾಶ ನೀಡಿರುವುದಾಗಿ ಜಿಲ್ಲಾಧಿಕಾರಿ ಕೆ. ಎನ್ ರಮೇಶ್ ಹೇಳಿದ್ದಾರೆ.

ಈ ಮಾರ್ಗದಲ್ಲಿ ಅಗತ್ಯವಿರುವ ಕಡೆ ಹಾಸನ ರಾಷ್ಟ್ರೀಯ ಹೆದ್ದಾರಿ ವಿಭಾಗದವರು ಸೂಚನಾ ಫಲಕ ಅಳವಡಿಬೇಕು. ವಾಹನಗಳು ಅತಿ ಜಾಗರುಕತೆಯಿಂದ ಸಂಚಿರಿಸಬೇಕು, ಚಾರ್ಮಡಿ ಘಾಟ್ ಬಳಿ ಸಾಕಷ್ಟು ಕಡೆ ಭೂ ಕುಸಿತ ಉಂಟಾಗಿರುವುದರಿಂದ ನಿಗದಿತ ವೇಗದ ಮಿತಿಯಲ್ಲಿ ಸಂಚರಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕೆಎಸ್ಸಾರ್ಟಿಸಿ ಕೆಂಪು ಬಸ್, ಆರು ಚಕ್ರದ ಲಾರಿ, ಟೆಂಪೋ, ಆಂಬುಲೆನ್ಸ್, ಕಾರು, ಜೀಪು, ವ್ಯಾನ್ ಹಾಗೂ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಟ್ಯಾಂಕರ್ಸ್, ಶಿಫ್ಟ್ ಕಾರ್ಗೋ ಕಂಟೈನರ್ ಹಾಗು ಹೆವಿ ಕಮರ್ಶಿಯಲ್ ವಾಹನಗಳಿಗಿ ಅಲ್ಲದೆ ಕೆಎಸ್ಸಾರ್ಟಿಸಿಯ ರಾಜಹಂಸ ಸೇರಿದಂತೆ ಲೆಕ್ಸುರಿ ಬಸ್ ಗಳಿಗೂ ನಿಷೇಧ ಹೇರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.