ಚಿಕ್ಕಮಗಳೂರು : ಕೊರೋನಾದ ಎರಡನೇ ಅಲೆ ಏಳುತ್ತಿದೆ. ರಾಜ್ಯ ಸರ್ಕಾರ ಹಲವು ನಿಯಂತ್ರಣ ಕ್ರಮಗಳನ್ನು ಅಳವಡಿಸಲು ಚಿಂತನೆ ನಡೆಸುತ್ತಿದ್ದರೆ,ಚಿಕ್ಕಮಗಳೂರಿಗೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. 

ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಸ್ಯಾನಿಟೈಸ್ ಮಾಡುವುದಿಲ್ಲ ಮಾಸ್ಕ್ ಧರಿಸುವ ಪ್ರವಾಸಿಗರು ಕಾಣುವುದೇ ಇಲ್ಲ. ಈ ರೀತಿಯ ಬೇಜವಾಬ್ದಾರಿಯುತ ಪ್ರವಾಸಿಗರ ದಂಡು ಚಿಕ್ಕಮಗಳೂರಿಗೆ ಬರುತ್ತಿರುವುದು ಸ್ಥಳೀಯರಿಗೆ ಬಹಳ ಆತಂಕ ಸೃಷ್ಟಿಮಾಡಿದೆ