ಚಿಕ್ಕಮಗಳೂರು ; ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿರುವ 16 ಪುಣ್ಯನದಿಗಳ ತೀರ್ಥ ಸಂಗ್ರಹಿಸುವ ರಾಮಾಮೃತ ರಥಯಾತ್ರೆಯು ಶನಿವಾರ 16  ಚಿಕ್ಕಮಗಳೂರು ನಗರ ಪ್ರವೇಶ ಮಾಡಿದೆ. 

ರತ್ನಗಿರಿ ರಸ್ತೆಯ ಶ್ರಿರಾಮ ಮಂದಿರದಲ್ಲಿ ಪೂರ್ಣಕುಂಭ ಸ್ವಾಗತದ ಮೂಲಕ ಬಸವನಹಳ್ಳಿ ಶಂಕರ ಮಠದ ರಾಮಮೂರ್ತಿ ಹಾಗೂ ಮೃತ್ತಿಕೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 

ಶ್ರೀರಾಮಾಮೃತ ತರಂಗಿಣಿ ಯಾತ್ರೆಯನ್ನು ವಧು ವರರೂ ಸಹ ಆಹ್ವಾನಿಸಿ ಪೂಜೆಯನ್ನು ಸಲ್ಲಿಸಿದರು. ಮಾರ್ಚ್ 24 ರಂದು ಶಂಕರ ಮಠದಿಂದ ಆಜಾದ್ ಪಾರ್ಕ್ ವರೆಗೂ ಸಂಕೀರ್ತನಾ ಯಾತ್ರೆ ಇರಲಿದೆ. ಹಾಗೂ ಇದರಲ್ಲಿ ಎಲ್ಲಾ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಹೇಳಿದರು