ಕೊಡಗು : ಭಾರತೀಯ ಸೇನೆಯ ಸುರಕ್ಷತಾ ಪಡೆಯ ಮಹಾನಿರ್ದೇಶಕರನ್ನಾಗಿ ಕೊಡಗಿನ ಹಿರಿಯ  ಐಪಿಎಸ್ ಅಧಿಕಾರಿ ಎಂ. ಎ ಗಣಪತಿ ಅವರನ್ನು ನೇಮಿಸಲಾಗಿದೆ.

ಎನ್‌ಎಸ್‌ಜಿ ಯಲ್ಲಿ 2024ರ ಫೆಬ್ರವರಿ 29 ರವರೆಗೂ ಗಣಪತಿ ಅವರು ಸೇವೆ ಅವಧಿ ನಡೆಯಲಿದೆ. ದೇಶದ ಮಾನ್ಯ ಪ್ರಧಾನಿ ಹಾಗೂ ಇತರ ಗಣ್ಯ ವ್ಯಕ್ತಿಗಳಿಗೆ ಎನ್‌ಎಸ್‌ಜಿ ಕಮಾಂಡೊಗಳ ರಕ್ಷಣೆ ಇರುತ್ತದೆ. ಗಣಪತಿ ಅವರು ಈಗ 57 ವರ್ಷದವರಾಗಿದ್ದಾರೆ. ರಾಷ್ಟ್ರಪತಿಗಳು 2010ರಲ್ಲಿ  ವಿಶೇಷ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ಪೊಲೀಸ್ ಪದಕ ಪಡೆದಿದ್ದಾರೆ.

ಗೃಹ ಸಚಿವಾಲಯದಲ್ಲಿ ಆಂತರಿಕ ಭದ್ರತೆ ಮತ್ತು ಉಗ್ರವಾದವನ್ನು ಹತ್ತಿಕ್ಕುವ ಕಾರ್ಯಗಳನ್ನು ಸಹ ಗಣಪತಿ ಅವರು ನಿರ್ವಹಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಕರ್ನಾಟದವರಿಗೆ ಈ ಅತ್ಯುನ್ನತ ಗೌರವ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ.