ಚಿಕ್ಕಮಗಳೂರು/ಕೊಪ್ಪ : ಮೆಣಸಿನಹಾಡ್ಯದ ಸಮುದಾಯ ಭವನದಲ್ಲಿ ಕಾಫಿ ಮಂಡಳಿಯು ಗಿರಿಜನ ಕಾಫಿ ಬೆಳೆಗಾರರೊಂದಿಗೆ ಅಯೋಜಿಸಿದ್ದ ಸಂಪರ್ಕ ಸಭೆಯ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಶ್ರೀ ಶಾಂತಾರಾಮ್ ಸಿದ್ದಿ ಆಗಮಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ಜಿ ಎಸ್ ಮಹಾಬಲ ರಾವ್ ಹಾಗೂ ಅಧ್ಯಕ್ಷತೆಯನ್ನು ಕಾಫಿ ಮಂಡಳಿಯ ಅಧ್ಯಕ್ಷರಾದ ಶ್ರೀ ಬೋಜೇ ಗೌಡ, ತಾಲ್ಲೂಕು ಪಂಚಾಯಿತ್ ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮಾ ಭಾಗವಹಿಸಿದ್ದರು, ಕಾಫಿ ಮಂಡಳಿಯ ಅಧಿಕಾರಿಗಳು ಕಾಫಿ ಕೃಷಿ ಬಗ್ಗೆ ಸಮಗ್ರ ಮಾಹಿತಿ ನಿಡಿದ್ದು, ಉಚಿತವಾಗಿ ಮಣ್ಣು ಪರೀಕ್ಷೆಯನ್ನೂ ಮಾಡಲಾಯಿತು.
ಗಿರಿಜನರ ಅನೇಕ ಸಮಸ್ಯೆಗಳನ್ನ ಆಲಿಸಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಮೆಣಸಿನ ಹಾಡ್ಯದ 11 ಮನೆಗಳ ವಿದ್ಯುತ್ ಸಂಪರ್ಕ ವಿಚಾರವಾಗಿ ಸಮಸ್ಯೆಯನ್ನ ಪರಿಹರಿಸುವ ನಿಟ್ಟಿನಲ್ಲಿ ಕೊಡಲೇ ಕೊಡೆಬೈಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಗೂರು, ಯಡಗುಂದ, ಮೆಣಸಿನಹಾಡ್ಯ, ಬೆಂಡೆಹಕ್ಲು, ಕಳಸ, ಕಿಗ್ಗಾ, ಎನ್ ಆರ್ ಪುರದ ಸೇರಿದಂತೆ ವಿವಿಧ ಭಾಗಗಳಿಂದ ವನವಾಸಿ ಬಂಧುಗಳು ಆಗಮಿಸಿದ್ದರು.


0 Comments