ಕೊಡಗು ಕೊರೋನಾ ಎರಡನೇ ಅಲೆಯ ಹೊಡೆತವನ್ನು ಈಗ ಅನುಭವಿಸುತ್ತದೆ. ಮೊದಲೆಲ್ಲ ದಿನಕ್ಕೆ ಒಂದರಿಂದ ಎರಡು ಪ್ರಕರಣಗಳು ಕಂಡುಬರುತ್ತಿದ್ದವು ಆದರೆ ಈಗ ದಿನಕ್ಕೆ ಎರಡಂಕಿ ಎಂಬಂತೆ ಪ್ರಕರಣಗಳು ಏರಿಕೆಯಾಗುತ್ತಿದೆ. 

ದೇಶದಲ್ಲಿ ಕೊರೋನಾ ಲಸಿಕೆ ಒಂದು ನೀಡಲಾಗುತ್ತಿದೆ ಹಾಗೆಯೇ ಕೊರೋನಾ ತನ್ನ ಎರಡನೇ ಅಲೆಯನ್ನೂ ಸಹ ಮುಂದುವರೆಸಿದೆ. ಈ ತಿಂಗಳ ಅಂದರೆ ಮಾರ್ಚ್ 19 ರ ನಂತರ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮಾ 23 ತಾರೀಕಿನಂದು ಒಟ್ಟು 25 ಪ್ರಕರಣಗಳು ದಾಖಲಾಗಿದೆ ಎಂದು ವರದಿಯಾಗಿದೆ.ಕೋರೋನಾ ಲಸಿಕೆ ಹಾಗೂ ರೋಗದ ಬಗ್ಗೆ ಜನಜಾಗೃತಿ ಅಭಿಯಾನ ಮೂಡಿಸುವ ಕುರಿತು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. 

ಪಕ್ಕದ ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಲು ಮನವಿ ಮಾಡಲಾಗಿದೆ. ಜನ ಆದಷ್ಟು ರೋಗದ ವಿರುದ್ಧ ಹೋರಾಡಬೇಕಾಗಿದೆ.