ಮಲೆನಾಡು ಭಾಗವಾದ ಚಿಕ್ಕಮಗಳೂರು ಕಳಸ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಮೋಡ ಕವಿದ ವಾತಾವರಣ ಕೂಡಿ ಸಂಜೆಯ ಹೊತ್ತಿಗೆ ನಿರಂತರ ಮಳೆಯಾಗಿದೆ. ಬೇಸಿಗೆ ಸುಡುವ ಬಿಸಿಲಿನ ಧಗೆಗೆ ಜನರಿಗೆ ಮಳೆಯಿಂದ ತಂಪೆರೆದಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ ಮಳೆಯಾಗಿದೆ. ಸಿದ್ದಾಪುರ ಯಲ್ಲಾಪುರ, ಮುಂಡಗೋಡ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಗುಡುಗು ಸಹಿತ ಭಾರೀ ಮಳೆಯ ಕಾರಣ ಸಿಡಿಲು ಬಡಿದು ಕುರಿಗಳ ಸಾವು ಆಗಿದೆ.ಹವಾಮಾನ ವರದಿಯ ಪ್ರಕಾರ ದಕ್ಷಿಣ ಒಳನಾಡಿನಲ್ಲಿ ಮಾರ್ಚ್ 30 ರ ನಂತರವೂ ಸಹ ಭಾರೀ ಮಳೆಯಾಗುವುದೆಂಬ ನಿರೀಕ್ಷೆಯಿದೆ.


0 Comments