ಚಿಕ್ಕಮಗಳೂರಿನ ರೈತ ಬಸವರಾಜು ಅವರು ತಾವು ಬೆಳೆದ ಎಲೆಕೋಸು ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ಟ್ರಾಕ್ಟರ್ ನಿಂದ ಬೆಳೆ ನಾಶ ಮಾಡಿದ್ದಾರೆ. 

ರೈತ ಬಸವರಾಜು ತಮ್ಮ ಹೊಲದಲ್ಲಿ ಕೋಸು ಬೆಳೆಯಲು 50,000 ಸಾವಿರದ ತನಕ ಪ್ರತಿ ವರ್ಷ ಖರ್ಚು ಮಾಡುತ್ತಿದ್ದರು. ಪ್ರತಿಫಲವಾಗಿ ಚೆನ್ನಾಗಿ ಬೆಳೆ ಬಂದರೂ ಸಹ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗೆ ಸೂಕ್ತ ಬೆಲೆಯೇ ಸಿಗಲಿಲ್ಲ. ಒಂದು ವೇಳೆ ಬೆಲೆ ಬಂದರೂ ಸಹ ತಾವು ಮಾಡಿದ ಖರ್ಚು ಸಹ ಗೀಟುತ್ತಿರಲಿಲ್ಲ. 

ಮೂರು ವರ್ಷದಿಂದ ಇದೇ ಪರಿಸ್ಥಿತಿಯನ್ನು ಎದುರಿಸಿ ಕೊನೆಗೆ ಬೇಸತ್ತು ಟ್ರಾಕ್ಟರ್ ಮೂಲಕ ತಾವು ಬೆಳೆದ ಬೆಳೆಯನ್ನು ತಾವೇ ನಾಶ ಮಾಡಿದ್ದಾರೆ.ಹಿರೇಗೌಜ ಗ್ರಾಮದಲ್ಲಿ ಸತತ ಬರಗಾಲ ಎದುರಾಗುತ್ತು. ಬೆಳೆಗೆ ತಕ್ಕಹಾಗೆ ನೀರು ಸಿಗದೇ ರೈತರು ಮೊದಲೇ ಚಿಂತೆಗೀಡಾಗಿದ್ದರು. 

ಇದರ ನಂತರ ಅಂದರೆ ಈ ಸಲದ ಮಳೆಗಾಲದಲ್ಲಿ ಮಾತ್ರ ಸಾಮಾನ್ಯವಾಗಿ ಮಳೆಯಾಗಿತ್ತು. ಈ ಸಂದರ್ಭದಲ್ಲಿ ತಮ್ಮ ಬೆಳೆಯ ಮಾರುಕಟ್ಟೆ ಬೆಲೆಯ ಮೇಲೆ ವಿಶ್ವಾಸ ಇಟ್ಟಿದ್ದ ರೈತರಿಗೆ ಬೆಲೆಕುಸಿತ ಆಘಾತ ನೀಡಿದಂತಾಗಿತ್ತು. ಹೀಗಾಗಿ ರೈತ ಬಸವರಾಜು ತಮ್ಮ ಬೆಳೆಯನ್ನೇ ನಾಶ ಮಾಡಿದರು