ಚಿಕ್ಕಮಗಳೂರು : ದೇಶದಲ್ಲಿ ಎರಡನೇ ಹಂತದ ಕೊರೋನಾ ಲಸಿಕೆ ನೀಡುವ ಕಾರ್ಯ ಶುರುವಾಗಿದೆ. ಕೊರೋನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಲಸಿಕೆ ಬಗ್ಗೆ ಹಲವಾರು ಕಡೆ ಜಾಗೃತಿ ಅಭಿಯಾನಗಳೂ ಶುರುವಾಗಿದೆ.
ಚಿಕ್ಕಮಗಳೂರಿನಲ್ಲಿ ಜಿಲ್ಲಾ ಬಿಜೆಪಿ ಯುವಮೋರ್ಚ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ವತಿಯಿಂದ ನಗರದ ಜನರಲ್ಲಿ ಕೊರೋನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಿದರು. ಜನರಿಗೆ ಲಸಿಕೆ ತೆಗೆದುಕೊಳ್ಳುವುದರ ಕುರಿತು ಹಾಗೂ ಅದರ ಉಪಯೋಗಳ ಬಗ್ಗೆ ಸವಿಸ್ತಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಇದಾಗಿದೆ.
ಅಭಿಯಾನದಲ್ಲಿ ಮಾತನಾಡಿದ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ನಗರ ಸಂಚಾಲಕ ಕೀರ್ತಿ ಶೆಟ್ಟಿ ಮಾತನಾಡಿ "ಜನರಿಗೆ ಕೊರೋನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಇದಾಗಿದೆ. ಕೊರೋನಾ ಲಸಿಕೆ ವಿರುದ್ಧ ವಿರೋಧ ಪಕ್ಷದವರು ಇಲ್ಲ ಸಲ್ಲದ ಆರೋಪ ಹೇಳುತ್ತಿದ್ದಾರೆ.ಆದರೆ ಕೊರೋನಾ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ" ಎಂದರು


0 Comments