ಚಿಕ್ಕಮಗಳೂರು/ಶೃಂಗೇರಿ ; ಸಾಮೂಹಿಕ ಅತ್ಯಾಚಾರ ಎನ್ನಲಾಗಿದ್ದ ಶೃಂಗೇರಿಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ರೇಪ್ ನ ರೂವಾರಿ ಆಕೆಯ ಚಿಕ್ಕಮ್ಮ ಅಲ್ಲ ಸ್ವತಃ ಬಾಲಕಿಯ ತಾಯಿ ಎನ್ನಲಾದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಜನವರಿ 30 ರಂದು ದಾಖಲಾದ ಪ್ರಕರಣದ ಬೆನ್ನು ಹತ್ತಿದ್ದ ASP ಶೃತಿ ನೇತೃತ್ವದ ತಂಡ, ಈ ವರೆಗೆ ಪ್ರಕರಣ ಸಂಬಂಧ ತಾಯಿ ಗೀತಾ ಸೇರಿ 32 ಜನರನ್ನು ಬಂಧಿಸಿತ್ತು. ತಾಯಿ ಸಾವನ್ನಪ್ಪಿದ ಬಳಿಕ ಬಾಲಕಿಯನ್ನು ಓದಿಸುತ್ತೇನೆಂದು ಕರೆತಂದಿದ್ದ ಚಿಕ್ಕಮ್ಮನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಈ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕಳೆದ ಒಂದೂವರೆ ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಹಣದಾಸೆಗೆ ಯುವತಿಯನ್ನು ವೇಶ್ಯೆ ವೃತ್ತಿಗೆ ತಳ್ಳಿದ್ದು ಆಕೆಯ ಚಿಕ್ಕಮ್ಮಳಲ್ಲ, ಹೆತ್ತ ತಾಯಿಯೇ ಎಂದು ಮೂಲಗಳಿಂದ ತಿಳಿದುಬಂದಿದೆ

ಉತ್ತರ ಕರ್ನಾಟಕ ಮೂಲದ ಮಹಿಳೆ ಎರಡನೇ ಮದುವೆಯಾಗ ಬಳಿಕ ಶೃಂಗೇರಿ ಸಮೀಪ ವಾಸವಿದ್ದಳು ಅಲ್ಲದೇ ಬಾಲಕಿಯನ್ನು ತನ್ನ ಅಕ್ಕನ ಮಗಳು ಎಂದು ಹೇಳಿ ಸಾಕುತ್ತಿದ್ದಳು. ಎರಡನೇ ಪತಿಯೊಂದಿಗೂ ದೂರವಾದ ನಂತರ ಪ್ರತ್ಯೇಕವಾಗಿ ತಾಯಿ ಹಾಗೂ ಮಗಳು ವಾಸವಿದ್ದರು.

ಹಣದಾಸೆಗೆ ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರಕರಣದಲ್ಲಿ ಈವರೆಗೆ 32 ಆರೋಪಿಗಳನ್ನು ಬಂಧಿಸಲಾಗಿದ್ದು ಇದರಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಇದ್ದಾರೆ. ಹಣಕ್ಕಾಗಿ ಸ್ವಂತ ಮಗಳನ್ನೇ ವೇಶ್ಯಾವಾಟಿಗೆ ತಳ್ಳಿದ ತಾಯಿಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಆಕೆಗೆ ಕಠಿಣ ಶಿಕ್ಷೆ ನೀಡಬೇಕಂಬ ಕೂಗು ಕೇಳಿಬರುತ್ತಿದೆ.