ಉತ್ತರ ಕನ್ನಡ/ಕಾರವಾರ:ಕಾರವಾರ  ಜನತೆಗೆ ಗೋವಾ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಕಾರವಾರ - ಮಡಗಾಂವ್ ನಡುವೆ ಬಸ್ ಓಡಾಡಲಿದೆ ಅದೂ ಮಾಮೂಲಿ ಬಸ್ ಅಲ್ಲ. 

ಗೋವಾ ರಸ್ತೆ ಸಾರಿಗೆ ಸಂಸ್ಥೆಯು ಕಾರವಾರ - ಮಡಗಾಂವ್ ನಡುವೆ ಸಂಪರ್ಕ ಕಲ್ಪಿಸುವ ಬ್ಯಾಟರಿ ಚಾಲಿತ ಬಸ್ ಸಂಚಾರ ಶುಕ್ರವಾರ ಪ್ರಾಯೋಗಿಕ ಹಂತದಿಂದ ಆರಂಭವಾಗಿದೆ. ಈ ಬಸ್ ನ ವಿಶೇಷತೆಗಳೆಂದರೆ ಸಿಸಿಟಿವಿ ಹೊಂದಿದೆ, ಎಮರ್ಜೆನ್ಸಿ ಬಟನ್, ಪ್ರಯಾಣಿಕರಿಗಾಗಿ ಯುಎಸ್‌ಬಿ ಸಾಕೆಟ್, ಹಾಗೂ ಫುಲ್ ಎಸಿ ವ್ಯವಸ್ಥೆ ಹೊಂದಿರುವ ಬಸ್ ಇದಾಗಿದೆ. 

ಈ ಬಸ್ ಒಮ್ಮೆ 4-5 ಗಂಟೆಗಳ ತನಕ ಚಾರ್ಜ್ ಮಾಡಿದರೆ 200 ಕಿ. ಮೀ ತನಕ ಬಸ್ ಸಂಚಾರ ಸುಲಭವಾಗಿ ಸಾಗುತ್ತದೆ. ಈ ಬಸ್ ನ ಬ್ಯಾಟರಿಯಲ್ಲಿ ಲೀಥಿಯಂ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.