ಶಿವಮೊಗ್ಗದಲ್ಲಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಪೋಲೀಸರು ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ದೂರಿನಲ್ಲಿ ರಾಕೇಶ್ ಟಿಕಾಯತ್ ಮಾಡಿದ ಭಾಷಣದ ಸಾಲನ್ನು ಸಹ ಉಲ್ಲೇಖಿಸಿದ್ದಾರೆ.
ಶಿವಮೊಗ್ಗದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್ "ಈ ಆಂದೋಲನ ತುಂಬಾ ದಿನಗಳವರೆಗೆ ನಡೆಯಬೇಕು. ಇದರಿಂದ ನಿಮ್ಮ ಜೊತೆ ಇನ್ನೊಬ್ಬರನ್ನೂ ಸಹ ಬರುತ್ತಾರೆ. ಈ ಆಂದೋಲನ ಗಾಡಿಯಲ್ಲಲ್ಲ ಟ್ರಾಕ್ಟರ್ ನಲ್ಲಿ ನಡೆಯಬೇಕು. ನೀವು ಕರ್ನಾಟಕವನ್ನು ಸಹ ದೆಹಲಿಯನ್ನಾಗಿ ಮಾಡಬೇಕು" ಎಂದು ಹೇಳಿದ್ದರು. ಈ ಮಾತುಗಳು ಕರ್ನಾಟಕದಲ್ಲಿ ದೆಹಲಿಯಲ್ಲಿ ನಡೆದ ಗಲಾಟೆಯ ರೀತಿಯ ದಾರಿ ಮಾಡುತ್ತದೆ ಎಂದು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಹೇಳಿಕೆ ಕೊಟ್ಟಿದ್ದು ಇದು ಮೊದಲೆಲ್ಲ. ಹಾವೇರಿಯಲ್ಲು ಸಹ ರಾಕೇಶ್ ಮೇಲೆ ಇಂತಹದೇ ಪ್ರಕರಣ ದಾಖಲಾಗಿದೆ. ಪೊಲೀಸರ ಈ ಕ್ರಮಕ್ಕೆ ಕರ್ನಾಟಕ ಮಹಾಪಂಚಾಯತ್ ಮುಖಂಡರು ಪ್ರತಿಕ್ರಿಯಿಸಿ ಖಂಡಿಸಿದ್ದಾರೆ. ರಾಕೇಶ್ ಟಿಕಾಯತ್ ಯಾವುದೇ ಪ್ರಚೋದನಾಕಾರಿ ಭಾಷಣ ಮಾಡಿಲ್,ಅದು ಕೇವಲ ಮನವಿ ಎಂದಿದ್ದಾರೆ.


0 Comments