ಕೊರೋನಾದ ಮೊದಲ ಒಂದು ವರ್ಷ ಪೂರೈಸಿ ಈಗ ತನ್ನ ಎರಡನೇ ಅಲೆ ತೋರಿಸಲು ಬಂದ ಹಾಗೆ ಕಾಣುತ್ತಿದೆ. ಕೇಸ್ ದಿನೇದಿನೇ ಉಲ್ಬಣವಾಗುತ್ತಿದೆ. ಮೊದಲಿನಿಂದಲೂ ಸಹ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಕೊರೋನಾ ಕೇಸ್ ದಾಖಲಾಗುತ್ತಿದೆ. 

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 31,855 ಕೊರೊನಾ ಸೋಂಕಿತರ ಪತ್ತೆಯಾಗಿದೆ. ಶಾಕಿಂಗ್ ಸಂಗತಿ ಎಂದರೆ ಕೇವಲ ಮುಂಬೈನಲ್ಲಿ ಮಾತ್ರವೇ 5,185 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಮತ್ತು 95 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 25,64,881 ಎಂದು ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾ ಸಿಎಂ ಉದ್ಧವ್ ಠಾಕ್ರೆ ಜನತೆ ಆದಷ್ಟು ನಿಯಮಗಳನ್ನು ಪಾಲಿಸಬೇಕು. ಸೋಂಕು ಹೆಚ್ಚಾದಲ್ಲಿ ಲಾಕ್ ಡೌನ್ ಅನಿವಾರ್ಯ ಎಂದು ಎಚ್ಚರಿಸಿದರು.