ಹಾಸನ : ಕಾಡುವಾಸಿಗಳಾದ ಪ್ರಾಣಿಗಳು ನಾಡಿಗೆ ಲಗ್ಗೆಯಿಟ್ಟು ದಾಂಧಲೆ ಎಬ್ಬಿಸುವ ಸಂಗತಿಗಳು ದಿನಂಪ್ರತಿ ನಡೆಯುತ್ತಿರುತ್ತದೆ. ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಯುವಕ ಗಂಭೀರ ಗಾಯಗೊಂಡಿದ್ದಾನೆ.
ಪುನೀತ್ ಎಂಬುವವರು ಕಾಡಾನೆ ದಾಳಿಗೆ ಕಾಲಿನ ಮೂಳೆ ಮುರಿದುಕೊಂಡ ವ್ಯಕ್ತಿ . ಪುನೀತ್ ಸುಳ್ಳಕ್ಕಿ ಸರ್ಕಾರಿ ಶಾಲೆಯ ಬಳಿ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಹಾಗೆ ಒಂಟಿ ಆನೆ ದಾಳಿ ಮಾಡಿದೆ. ದಾಳಿಯಿಂದ ತಪ್ಪಿಸಿಕೊಳ್ಳುವಾಗ ಆಯತಪ್ಪಿ ಕೆಳಗೆ ಬಿದ್ದಾದ ಬಲಗಾಲಿನ ಮೂಳೆಗೆ ಪೆಟ್ಟಾಗಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿದ ಗಾಯಾಳು ಪುನೀತ್ "ಆನೆ ನಾಡಿಗೆ ಬರದ ಹಾಗೇ ವಾಚರ್ಸ್ ನೇಮಕ ಮಾಡಲಾಗಿದೆ. ಆದರೂ ಸಹ ಕಾಡಾನೆಗಳು ವಾಚರ್ಸ್ ಗಳ ಗಮನಕ್ಕೂ ಬಾರದ ಹಾಗೆ ಹಗಲಿನಲ್ಲೇ ದಾಳಿ ಹೇಗೆ ಮಾಡುತ್ತವೆ" ಎಂದು ಹೇಳಿದರು.


0 Comments