ಚಿಕ್ಕಮಗಳೂರು ವಲಯ ವ್ಯಾಪ್ತಿಯ ಕೆಳಗಾನೆ ಗ್ರಾಮ ಸಮೀಪದ ಕಾಫೀ ತೋಟದಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳ ಬೇಟೆಗಾಗಿ ಕಳ್ಳ ಬೇಟೆಗಾರರು ಹಾಕಿದ್ದ ಉರುಳಿಗೆ ಬಿದ್ದು ಗಂಡು ಚಿರತೆ ಸಾವನ್ನಪ್ಪಿದೆ. ಕಾಫೀ ತೋಟದಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳ ಬೇಟೆಗಾಗಿ ಉರುಳು ಹಾಕುವ ತಂತ್ರ ಸದ್ದಿಲ್ಲದೆ ನಡೆಯುತ್ತಿದೆ.

 ವಿನಾಶದ ಅಂಚಿನಲ್ಲಿರುವ ಹುಲಿ, ಚಿರುತೆ ಇನ್ನೂ ಮುಂತಾದ ವನ್ಯ ಪ್ರಾಣಿಗಳ ಜೀವಕ್ಕೆ ಉರುಳು ಕುತ್ತು ತಂದಿದೆ. ಅಕ್ರಮವಾಗಿ ವನ್ಯ ಪ್ರಾಣಿಗಳ ಜೀವಕ್ಕೆ ಸಂಚಾರ ತರುವು ಉರುಳು ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುಬೇಕು. ತೋಟದಲ್ಲಿ ಅಕ್ರಮವಾಗಿ ಉರುಳು ಹಾಕುವ ಸಂಬಂಧ ತೋಟದ ಮಾಲೀಕರನ್ನು ಹೋಣೆಗರರಾಗಿ ಮಾಡಿ ಪ್ರಕರಣ ದಾಖಲಿಸಿದರೆ ಮಾತ್ರ ಖಾಸಗಿ ಕೃಷಿ ಜಮೀನಿನಲ್ಲಿ ಅಕ್ರಮ ಉರುಳು ಹಾಕುವ ಕಳ್ಳ ಬೇಟೆ ತಡೆಯಬಹುದು.ಈ ಸಂಬಂಧ ಸರ್ಕಾರ ಮತ್ತು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಳ್ಳ ಬೇಟೆಗಾರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಪ್ರಕ್ರಿಯೆ ಜರುಗಿಸಬೇಕು. ವಿನಾಶದ ಅಂಚಿನಲ್ಲಿರುವ ವನ್ಯಜೀವಿಗಳನ್ನು ರಕ್ಷಿಸಬೇಕು.