ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಏಪ್ರಿಲ್ 13 ಹಾಗೂ 14 ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗೆಯೇ ಎಲ್ಲೋ ಅಲರ್ಟ್ ಸಹ ಘೋಷಿಸಿದೆ.

ಇನ್ನುಳಿದಂತೆ ಅದೇ ಎರಡು ದಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ನಿರಂತರ ವಿದ್ಯುತ್ ಕಡಿತದಿಂದ ತೊಂದರೆಗೆ ಈಡಾಗಿರುವ ಮಲೆನಾಡಿನ ರೈತರಿಗೆ ಮಳೆ ಬಂದಲ್ಲಿ ಅನುಕೂಲ ಇದ್ದರೂ ಸಹ ಹೆಚ್ಚು ಮಳೆ ಸುರಿದಲ್ಲಿ ಸಮಸ್ಯೆ ಸಹ ತಪ್ಪಿದ್ದಲ್ಲ