ಚಿಕ್ಕಮಗಳೂರು: ಇಡೀ ರಾಜ್ಯವೇ ಕೊರೋನಾ ವೈರಸ್ ನಿಂದ ತತ್ತರಿಸಿರುವ ಈ ಸಮಯದಲ್ಲಿ ಮುಷ್ಕರ ನಡೆಸಲು ಸಮಯವಲ್ಲ. ಕೂಡಲೇ ಮುಷ್ಕರ ನಿಲ್ಲಿಸಿ, ಸೇವೆ ಆರಂಭಿಸಿ ಎಂದು ಹೈಕೋರ್ಟ್ ಮಂಗಳವಾರ ಮುಷ್ಕರ ನಿರತ ಸಾರಿಗೆ ನೌಕರರಿಗೆ ಸೂಚನೆ ನೀಡಿತ್ತು.
ಕಳೆದ 15 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ಮುಷ್ಕರದ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಕೋವಿಡ್ ಸಂಕಷ್ಟದ ಸಮಯದಲ್ಲಿ ಈ ರೀತಿಯಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ. ನಿಮ್ಮ ಬೇಡಿಕೆ ತಕ್ಷಣಕ್ಕೆ ಕಾಯ್ದಿರಿಸಿ ತಕ್ಷಣ ಸೇವೆ ಆರಂಭಿಸಿ ಎಂದು ಹೇಳಿ, ಅಲ್ಲದೇ ಈ ಸಂಬಂಧ ರಾಜ್ಯ ಸರ್ಕಾರ, ಸಾರಿಗೆ ಇಲಾಖೆ ಮತ್ತು ನೌಕರರ ಸಂಘಕ್ಕೂ ನೋಟಿಸ್ ನೀಡಿತ್ತು.
ಇದೀಗ ರಾಜ್ಯದ ಬಹುತೇಕ ಕಡೆಗಳಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳು ರಸ್ತೆಗಿಳಿದಿದ್ದು ನೌಕರರು ಮುಷ್ಕರ ಕೈಬಿಟ್ಟಿಟ್ಟಿದ್ದಾರೆ. ಇಷ್ಟು ದಿನಗಳ ವರೆಗೆ ಮುಷ್ಕರ ನಡೆಸಿದರೂ ಸಮಸ್ಯೆ ಬಗೆಹರಿಯದಿದ ಕುರಿತು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಇಂದ ಚಿಕ್ಕಮಗಳೂರು ವಿಭಾಗದಲ್ಲೂ ಬದಲಾವಣೆ ಕಂಡಿದ್ದು. ಚಿಕ್ಕಮಗಳೂರು ವಿಭಾಗದ ಬೇಲೂರು, ಕಡೂರು, ಅರಸೀಕೆರೆ, ಹಾಗೂ ಮೂಡಿಗೆರೆ ಡಿಪೋಗಳಿಂದ ಸುಮಾರು 246ಕ್ಕೂ ಅಧಿಕ ಬಸ್ಸುಗಳು ಸಂಚಾರ ಆರಂಭಿಸಿವೆ.
ಈ ಕುರಿತು ನ್ಯೂಸ್ ಮಲ್ನಾಡ್ ಗೆ ಪ್ರತಿಕ್ರಿಯಿಸಿದ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ಅವರು ಈ ದಿನದ ಸಂಜೆಯಿಂದಲೇ ಬಸ್ ಗಳು ಎಲ್ಲೆಡೆ ಎಂದಿನಂತೆ ಸಂಚಾರ ಪ್ರಾರಂಭಿಸಲಿವೆ ಎಂದರು.


0 Comments