ಪೊಲೀಸರು ಖಚಿತ ಸುಳಿವಿನ ಮೇರೆಗೆ ನೆನ್ನೆ ತಡರಾತ್ರಿ ಅಕ್ರಮ ಮಾರಾಟ ಮದ್ಯ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದು ಸುಮಾರು 177 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ನೆನ್ನೆ ರಾತ್ರಿ ಚಿಕ್ಕಮಗಳೂರು ನಗರದ ಪಂಪನಗರದಲ್ಲಿ, ಪೊಲೀಸ್ ನಿರೀಕ್ಷಕರಾದ ಗುರುಪ್ರಸಾದ್ ರವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸುನಿತಾ ಎಂಬುವವರ ಮನೆಯಿಂದ 3 ವಿಧದ 17 ಮದ್ಯದ ಬಾಕ್ಸ್ - ಒಟ್ಟು ರೂ. 57,333.00 ಮೌಲ್ಯ ಬೆಲೆ ಬಾಳುವ 146.88 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಎರಡನೇ ದಾಳಿಯಲ್ಲಿ ಚಿಕ್ಕಮಗಳೂರು ನಗರದ ಶಂಕರಪುರದಲ್ಲಿ ದಾಳಿ ನಡೆಸಿ ವೆಂಕಟೇಶ್ ಎಂಬುವವರ ಸೌದೆ ಡಿಪೋದಲ್ಲಿಟ್ಟು ಮಾರಾಟ ಮಾಡುತ್ತಿದ್ದ ರೂ.15,324 ಮೌಲ್ಯ ಬಲೆ ಬಾಳುವ 30.78 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಲೆನಾಡಿನ ಭಾಗದಲ್ಲಿ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ದಂಧೆ ಸಾಗುತ್ತಿದ್ದರೂ ಸಂಬಂಧಿಸಿದ ಇಲಾಖೆ ಯಾವುದೇ ಕ್ರಮ ಕೈಕೊಳ್ಳುತ್ತಿಲ್ಲ ಎಂದು ಹಲವೆಡೆ ಸಾರ್ವಜನಿಕರು ಈ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಈ ದಾಳಿಯು ಜಿಲ್ಲೆಯ ಇತರೆ ಭಾಗಗಳಲ್ಲೂ ಮುಂದಿನ ದಿನಗಳಲ್ಲಿ ನಡೆಯಲಿ ಎಂಬುದು ಜನರ ಆಶಯವಾಗಿದೆ.



0 Comments