ಮೊದಲ ಅವಧಿಗೆ ಹಿರಿಯ ನಾಗರೀಕರಿಗೆ ವ್ಯಾಕ್ಸಿನ್ ನೀಡಿದ ಸರ್ಕಾರ, ಎರಡನೇ ಅವಧಿಯಲ್ಲಿ 45ವರ್ಷ ಮೇಲ್ಪಟ್ಟವರಿಗೆ ನೀಡಲಾಗಿತ್ತು. ಇದೀಗ ಮೇ ತಿಂಗಳ 1ನೇ ತಾರೀಖಿನಿಂದ ಮೂರನೆಯ ಅವಧಿಗೆ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಈ ಹಿಂದಿನ ಅವಧಿಗಳಲ್ಲಿ ನೇರವಾಗಿ ಆಸ್ಪತ್ರೆಗೆ ಅಥವಾ ಆರೋಗ್ಯ ಕೇಂದ್ರಕ್ಕೆ ತೆರಳಿ ಅಲ್ಲಿಯೇ ರಿಜಿಸ್ಟರ್ ಮಾಡಿಸಿ ತೆಗೆದುಕೊಳ್ಳಬಹುದಿತ್ತು. ಆದರೆ ಈ ಅವಧಿಯಲ್ಲಿ ಆ ಆಯ್ಕೆ ಇರುವುದಿಲ್ಲ 18 ವರ್ಷದಿಂದ 45 ವರ್ಷದ ಒಳಗಿನ ಎಲ್ಲರೂ ವ್ಯಾಕ್ಸಿನೇಷನ್ ಗೆ ತೆರಳುವ ಮುನ್ನ www.cowin.gov.in ವೆಬ್ಸೈಟ್, ಆರೋಗ್ಯ ಸೇತು ಆಪ್ ಅಥವಾ ಉಮಂಗ್ ಆಪ್ ಮೂಲಕ ಇಂದು ಸಂಜೆ 4ರ ನಂತರ ರಿಜಿಸ್ಟರ್ ಮಾಡಿಕೊಂಡು ಮೇ ತಿಂಗಳ ದಿನಾಂಕ 1ರ ನಂತರ ತೆರಳಿದಲ್ಲಿ ಮಾತ್ರ ವ್ಯಾಕ್ಸಿನೇಷನ್ ನೀಡಲಾಗುತ್ತದೆ.
ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳಿಗೆ ಹಾಲುಣಿಸುತ್ತಿರುವ ಮಹಿಳೆಯರು ಹೊರತುಪಡಿಸಿ ಎಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ.
ಋತುಚಕ್ರದಲ್ಲಿರುವ ಮಹಿಳೆಯರು ವ್ಯಾಕ್ಸಿನ್ ತೆಗೆದುಕೊಳ್ಳಬಾರದು ಎಂಬ ಸುಳ್ಳು ಸುದ್ದಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಕುರಿತು ಸಂಭಂಧಪಟ್ಟ ಇಲಾಖೆಯೇ ಸ್ಪಷ್ಟನೆ ನೀಡಿದ್ದು ಋತುಚಕ್ರದಲ್ಲಿ ರುವ ಮಹಿಳೆಯರು ವ್ಯಾಕ್ಸಿನ್ ತೆಗೆದುಕೊಂಡಲ್ಲಿ ಯಾವುದೇ ಅಡ್ಡ ಪರಿಣಾಮ ಬೀರುತ್ತದೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವ್ಯಾಕ್ಸಿನೇಷನ್ ಗೆ ರಿಜಿಸ್ಟರ್ ಮಾಡುವುದು ಹೇಗೆ?
- www.cowin.gov.in ವೆಬ್ಸೈಟ್ ಓಪನ್ ಮಾಡಿ.
- Register/Sign in ಕ್ಲಿಕ್ ಮಾಡಿ
- ನಿಮ್ಮ ಮೊಬೈಲ್ ನಂಬರ್ ಹಾಕಿ "Get Otp" ಬಟನ್ ಅನ್ನು ಒತ್ತಿ
- ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ OTP ಅನ್ನು ಹಾಕಿ "Verify" ಕ್ಲಿಕ್ ಮಾಡಿ.
- ಹೆಸರು, ವಯಸ್ಸು, ಲಿಂಗ, ಐಡೆಂಟಿಟಿ ಪ್ರೂಫ್ ನಂಬರ್
- Register ಗೆ ಕ್ಲಿಕ್ ಮಾಡಿ
- ರಿಜಿಸ್ಟರ್ ಮಾಡಿದ ನಂತರ "Schedule" ಗೆ ಕ್ಲಿಕ್ ಮಾಡಿ.
- ನಿಮ್ಮ ಊರಿನ ಪಿನ್ ಕೋಡ್ ನಮೂದಿಸಿ ಅಥವಾ ರಾಜ್ಯ-ಜಿಲ್ಲೆ-ತಾಲೂಕು ಆಯ್ಕೆ ಮಾಡಿ ವ್ಯಾಕ್ಸಿನೇಷನ್ ಸೆಂಟರ್ ಅನ್ನು ಸೆಲೆಕ್ಟ್ ಮಾಡಿ ಡೇಟ್ ಮತ್ತು ಸಮಯ ಸೆಲೆಕ್ಟ್ ಮಾಡಿ "Confirm" ಕ್ಲಿಕ್ ಮಾಡಿ.
ಆರೋಗ್ಯ ಸೇತು ಆಪ್ ನಲ್ಲಿ Cowin Tab Select ಮಾಡಿ Vaccination register click ಮಾಡುವ ಮೂಲಕ ರಿಜಿಸ್ಟರ್ ಮಾಡಬಹುದು.
ಒಂದು ಮೊಬೈಲ್ ಸಂಖ್ಯೆಯಿಂದ ನಾಲ್ಕು ಜನರು ರಿಜಿಸ್ಟರ್ ಮಾಡಬಹುದಾಗಿದ್ದು, ವ್ತಾಕ್ಸಿನ್ ಡೇಟ್ ಅನ್ನು ರಿಶೆಡ್ಯೂಲ್ ಸಹ ಮಾಡಬಹುದಾಗಿದೆ. ಭಾರತದಲ್ಲಿ ವ್ಯಾಕ್ಸಿನ್ ಸಕ್ಸಸ್ ರೇಟ್ 99.6% ಇದ್ದು ಯಾವುದೇ ಭಯ, ಅಂಜಿಕೆ ಇಲ್ಲದೇ ವ್ಯಾಕ್ಸಿನ್ ತೆಗೆದುಕೊಂಡು ಕೊರೋನಾ ಹೋಗಲಾಡಿಸೋಣ.



0 Comments