ಕಾಫೀನಾಡಿನಲ್ಲಿ ಕೋರೋನ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ 25 ವರ್ಷದ ಯುವಕನೊಬ್ಬ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತ ಯುವಕ ಬೆಂಗಳೂರಿನಿಂದ ಕೊಪ್ಪಕ್ಕೆ ಐದು ದಿನದ ಹಿಂದಷ್ಟೆ ಬಂದಿದ್ದನು ನಿನ್ನೆ ಯುವಕನಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು ತಕ್ಷಣವೇ ಕೊಪ್ಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಕೊರೋನಾ ಟೆಸ್ಟ್ ನಲ್ಲಿ ಪಾಸಿಟೀವ್ ವರದಿ ಬಂದಿದ್ದು ಕೆಲವೇ ಸಮಯದಲ್ಲಿ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಯುವಕ ಬೆಂಗಳೂರಿನಿಂದ ಬಂದ ಬಳಿಕ ತನ್ನ ತಾಯಿಯೊಂದಿಗೆ ವಾಸವಿದ್ದ. ಮೃತಪಟ್ಟ ಯುವಕನಿಗೆ ಬೇರೆ ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಇತ್ತೇ ಎಂಬುವುದರ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ. ಈ ಹಿಂದೆ 65 ವರ್ಷದ ವೃದ್ಧರೊಬ್ಬರು ಕೊರೋನಾದಿಂದ ಮೃತಪಟ್ಟಿದ್ದು ಕೊಪ್ಪ ತಾಲೂಕಿನಲ್ಲಿ ಇದು ಎರಡನೆಯ ಬಲಿಯಾಗಿದ್ದು, ಕಾಫಿನಾಡಿನ ಜನ ಮತ್ತೆ ಆತಂಕಕ್ಕೀಡಾಗಿದ್ದಾರೆ.



0 Comments