ರಾಜ್ಯದ್ಯಂತ 14 ದಿನದ ಲಾಕ್ ಡೌನ್ ಹೇರಿದ ಬಳಿಕ ಜಿಲ್ಲೆಯಲ್ಲಿ ಕೊರೋನಾ ಕೇಸ್ ಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿತ್ತು. ನಿನ್ನೆ 1 ಸಾವು ಸಂಭವಿಸಿದ್ದಲ್ಲದೆ ಒಟ್ಟು 242 ಪ್ರಕರಣ ದಾಖಲಾಗಿದ್ದವು. ಆದರೆ ಇಂದು ನಿರೀಕ್ಷೆ ಗಿಂತಲೂ ಹೆಚ್ಚು ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ಒಟ್ಟು ದಾಖಲೆಯ 542 ಕೇಸ್ ಗಳು ಪತ್ತೆಯಾಗಿದ್ದು, 2 ಸಾವು ಸಂಭವಿಸಿದೆ.
200 ರೋಗಿಗಳು ಡಿಸ್ಚಾರ್ಜ್ ಆಗಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನದ ಸಂಗತಿಯಾಗಿದೆ.
ತಾಲ್ಲೂಕುವಾರು ನೋಡಿದಾಗ
ಚಿಕ್ಕಮಗಳೂರು 162
ಶೃಂಗೇರಿ 25
ಮೂಡಿಗೆರೆ 98
ಕೊಪ್ಪ 25
ಎನ್ ಆರ್ ಪುರ 30
ತರೀಕೆರೆ 97
ಕಡೂರು 105
ಹೀಗೆ ಒಟ್ಟು 542 ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.
18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ವ್ಯಾಕ್ಸಿನ್ ತೆಗೆದುಕೊಳ್ಳೀ.
ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ ಭಯ ಬೇಡ ಎಚ್ಚರಿಕೆ ಇರಲಿ



0 Comments