ರಸಗೊಬ್ಬರ ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ದಿನ ಉಪಯೋಗಿ ವಸ್ತುಗಳ ಬೆಲೆ ಏರಿಕೆ ವಿರುದ್ಧ ನರಸಿಂಹರಾಜಪುರ ತಾಲ್ಲೂಕು ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ದಿನ ಉಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಮಾಡುತ್ತಿದ್ದು ಜನಸಾಮಾನ್ಯರು ಕೂಲಿ ಕಾರ್ಮಿಕರು ಹಾಗೂ ಇತರೆ ಬಡ ಮಧ್ಯಮವರ್ಗದವರು ಬೆಲೆ ಏರಿಕೆ ತಡೆಯಲಾರದೆ ಜೀವನವನ್ನು ನಡೆಸುವುದು ಕಷ್ಟಕರವಾಗಿದೆ. ರೈತರು ತಮ್ಮ ಹಲವು ಬೇಡಿಕೆಗಳನ್ನು ಮುಂದಿಟ್ಟು ಚಳುವಳಿಗಳನ್ನು ನಡೆಸಿದರು. ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಈಗಿನ ಕೇಂದ್ರ ಸರ್ಕಾರವು ರೈತ ವಿರುದ್ಧ ಧೋರಣೆ ಹೊಂದಿದ್ದು, ರೈತರ ಜೀವ ಹಾಗೂ ಜೀವನದೊಂದಿಗೆ ಚೆಲ್ಲಾಟ ವಾಡುತ್ತಿದೆ. ಇದು ಗಂಭೀರ ವಿಚಾರವಾಗಿದ್ದು ನಾವೆಲ್ಲರೂ ರೈತರ ಪರ ನಿಲ್ಲ ಬೇಕಿದೆ.
ಸರ್ಕಾರ ಈ ಕೂಡಲೇ ರಸಗೊಬ್ಬರದ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕಿಸಾನ್ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಭಾಗಿಯಾಗಿದ್ದರು. ಕಾಂಗ್ರೆಸ್ ಮುಖಂಡ ಅಂಶುಮಾನ್ ಅವರು ನೇತೃತ್ವ ವಹಿಸಿದ್ದರು. ಹಾಗೆಯೇ ಚಿಕ್ಕಮಗಳೂರು ಘಟಕದ ವತಿಯಿಂದಲೂ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


0 Comments