ಶಿವಮೊಗ್ಗದ ಕೆ ಎಂ ಶಾಂತಾರಾಜು ಅವರು ಜಿಲ್ಲಾ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರು ಬೆಂಗಳೂರಿನ ಪೂರ್ವ ಸಂಚಾರ ವಿಭಾಗದ ಡೆಪ್ಯುಟಿ ಕಮಿಷನರ್ ಆಗಿ ವರ್ಗಾವಣೆಗೊಂಡಿದ್ದಾರೆ. 

ಶಿವಮೊಗ್ಗದ ನೂತನ ರಕ್ಷಣಾಧಿಕಾರಿಯಾಗಿ ಈಗ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಲಕ್ಷ್ಮೀಪ್ರಸಾದ್ ಕಾರ್ಯನಿರ್ವಹಿಸಲಿದ್ದಾರೆ. ಲಕ್ಷ್ಮೀ ಪ್ರಸಾದ್ ಅವರು ಬಿಟೆಕ್ ಪದವೀಧರರಾಗಿದ್ದಾರೆ. 2019 ರಲ್ಲಿ ದಕ್ಷಿಣ ಕನ್ನಡದ ಎಸ್ಫಿಯಾಗಿ ವರ್ಗಾವಣೆಗೊಂಡಿದ್ದರು.