ಅದೇ ಸಮಯದಲ್ಲಿ ಒಬ್ಬ ಹುಡುಗ ಈ ಸುಂದರ ದೃಶ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿರುತ್ತಾನೆ, ಆಗ ಅಕಸ್ಮಾತಾಗಿ ಕ್ಯಾಮರಾ ಅವನ ಕೈ ಜಾರಿ ನೀರಿಗೆ ಬೀಳುತ್ತದೆ. ನೀರಿನಿಂದ ಕ್ಯಾಮರಾವನ್ನು ಹೇಗೆ ಹೊರ ತೆಗೆಯುವುದು ಎಂದು ಯೋಚಿಸುತ್ತಿರುವಾಗಲೇ ಅದೇ ತಿಮಿಂಗಿಲ ಅಲ್ಲಿಗೆ ಬಂದು ಕ್ಯಾಮರಾವನ್ನು ನೀರಿನಿಂದ ಮೇಲೆ ತೆಗೆದು ಕೊಡುತ್ತದೆ.
ಸುತ್ತಲೂ ನೆರೆದಿದ್ದ ಜನರು ಈ ದೃಶ್ಯವನ್ನು ನೋಡಿ ನಿಬ್ಬೆರಗಾಗುತ್ತಾರೆ. ತಿಮಿಂಗಲಕ್ಕೆ ಇಂತಹ ಬುದ್ದಿ ಹೇಗೆ ಬಂತು ಎಂಬುದು ಒಂದು ಆಶ್ಚರ್ಯದ ಸಂಗತಿಯೇ ಆಗಿದೆ.
ಅಲ್ಲಿಯೇ ಇದ್ದ ಇನ್ನೊಬ್ಬ ವ್ಯಕ್ತಿ ಇದನ್ನೆಲ್ಲಾ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದು ನಿಜಕ್ಕೂ ಮನೋರಂಜನೆ ನೀಡುವುದರಲ್ಲಿ ಅನುಮಾನವೇ ಇಲ್ಲ. ಬಹುಷಃ ನೀರನ್ನು ಸ್ವಚ್ಛವಾಗಿ ಇಡುವ ಕಾರಣದಿಂದ ತಿಮಿಂಗಿಲ ಹೀಗೆ ಮಾಡಿರಬಹುದು ಎಂದು ಜನರು ತಮಾಷೆಯಾಗಿ ಮಾತನಾಡುತ್ತಿದ್ದಾರೆ.


0 Comments