ಚಿಕ್ಕಮಗಳೂರು
ಧಾರ್ಮಿಕ ಕಾರ್ಯಕ್ರಮಕ್ಕೆ ಸಜ್ಜಾದ ಶೃಂಗೇರಿ ಶ್ರೀಶಾರದಾ ಪೀಠ
ಶೃಂಗೇರಿ ; ಜಗದ್ಗುರು ಶ್ರೀ ಭಾರತೀತಿರ್ಥ ಮಹಾಸನ್ನಿಧಾನಂಗಳವರ 71 ವರ್ಧಂತಿ ಉತ್ಸವದ ಅಂಗವಾಗಿ ಏಪ್ರಿಲ್ 13 ರಿಂದ 27 ರವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಪೂರ್ವತಯಾರಿ 90%ನಷ್ಟು ಸಂಪೂರ್ಣವಾಗಿದೆ. ಯಾಗಶಾಲೆಯಲ್ಲಿ ಹೋಮಕುಂಡಗಳು ಸಿದ್ಧತೆಗೊಂಡಿವೆ, ಋತ್ವಿಜರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.ಯಾಗ ಮಾಡುವ ಋತ್ವಿಜರ ಸಾಮಾಜಿಕ ಅಂತರ ಕಾಪಾಡಲು ಕುಳಿತುಕೊಳ್ಳುವ ಸ್ಥಳಗಳನ್ನು ಗುರುತು ಮಾಡಲಾಗಿದೆ. ಯಾಗಶಾಲೆಯ ಆವರಣವು ಸ್ವಾಗತ ಮಂಟಪ ಹಾಗೂ ಮಲೆನಾಡಿನ ಸೋಗೆ ಚಪ್ಪರದಿಂದ ಕಂಗೊಳಿಸುತ್ತಿದೆ. ಭಕ್ತಾದಿಗಳು ಶ್ರೀಮಠದ ಈ ಕಾರ್ಯಕ್ರಮದ ಪೂರ್ವಸಿದ್ಧತಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಮಠದ ಆಡಳಿತಾಧಿಕಾರಿ, ಗುರುಸೇವಾಧುರೀಣ ಡಾ. ವಿ. ಆರ್. ಗೌರಿಶಂಕರ್ ರವರು ಭಕ್ತಾದಿಗಳು ಕೋವಿಡ್ ನಿಯಮಾನುಸಾರವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗವಹಿಸಬೇಕಾಗಿ ಕೋರಿದ್ದಾರೆ.
ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಿ
ಚಿಕ್ಕಮಗಳೂರು ;ಚಿಕ್ಕಮಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತನ ಹತ್ಯೆಯ ತನಿಖೆಯಾಗಬೇಕು ಎಂದು ಚಿಕ್ಕಮಗಳೂರಿನ ಹಿಂದೂ ಸಂಘಟನೆಗಳು ಹಾಗೂ ಕಾರ್ಯಕರ್ತರು ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಶಿವಮೊಗ್ಗದ ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಪ್ರಶಾಂತ್ ಬಂಗೇರ ಪ್ರತಿಕ್ರಿಯಿಸಿದ್ದಾರೆ.
"ಚಿಕ್ಕಮಗಳೂರಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆ ಖಂಡನೀಯವಾಗಿದೆ. ಕೂಡಲೇ ಮೃತ ಯುವಕನ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡಬೇಕು. ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷಿಸಬೇಕು" ಎಂದು ಆಗ್ರಹಿಸಿದ್ದಾರೆ
ಶಿವಮೊಗ್ಗ
ಆಮಿಷವೊಡ್ಡಿ ಬಿಜೆಪಿ ಚುನಾವಣೆ ಗೆದ್ದಿದೆ - ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್
ಶಿವಮೊಗ್ಗ ; ಮಾರ್ಚ್ 29 ರಂದು ನಡೆದ ಪುರಸಭೆಯ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿತ್ತು. ಈ ಬಗ್ಗೆ ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.
"ಪುರಸಭೆಯ ಅಧಿಕಾರಕ್ಕೋಸ್ಕರ ಬಿಜೆಪಿ ಮೋಸ ಮಾಡಿ ಈ ಚುನಾವಣೆಯಲ್ಲಿ ಗೆದ್ದಿದೆ. ಉಪಚುನಾವಣೆ ನಡೆಸಬೇಕೆಂದೇ ಕಾಂಗ್ರೆಸ್ಸಿನ ಸದಸ್ಯರು ರಾಜೀನಾಮೆ ನೀಡುವ ಹಾಗೆ ಮಾಡಿದರು. ನಂತರ ಅವರನ್ನು ತಮ್ಮ ಪಕ್ಷಕ್ಕೇ ಸೇರಿಸಿಕೊಂಡರು. ತಮ್ಮ ವಾರ್ಡಿನಲ್ಲಿ ಮತ ಹೆಚ್ಚು ಸಿಗುವುದಕ್ಕೋಸ್ಕರ ಬೇರೆ ಕಡೆಯ ಮತದಾರರ ಹೆಸರನ್ನು ತಮ್ಮ ವಾರ್ಡಿಗೆ ಸೇರಿಸಿದ್ದಾರೆ. ಈ ಕೆಲಸ ಮಾಡಲು ಅಧಿಕಾರಿಗಳಿಗೆ ಒತ್ತಡ ಹಾಕಿದ್ದಾರೆ. "ಎಂದು ಆರೋಪಿಸಿದರು.
ಹಾಸನ
ಪಾದಯಾತ್ರೆಯ ಕೈಗೊಂಡಿರುವ ಪ್ರದೀಪ್ ಮೇಲೆ ಎಫ್ಐಆರ್
ಹಾಸನ ;ಸಾರಿಗೆ ನೌಕರರ ಕಷ್ಟಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿ ಕಾಂತರಾಜಪುರದ ಸಾರಿಗೆ ನೌಕರರಾದ ಪ್ರದೀಪ್ ಅವರು ಪಾದಯಾತ್ರೆ ಹೊರಟಿರುವ ದೃಶ್ಯಗಳು ವೈರಲಾಗಿತ್ತು. ಕಾಂತರಾಜಪುರದ ನಿವಾಸಿ ಪ್ರದೀಪ್ ಅವರು, ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಪಾದಯಾತ್ರೆ ಹೊರಟಿರುವ ಪ್ರದೀಪ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.ಬಸ್ ಮುಷ್ಕರಕ್ಕೆ ಪ್ರದೀಪ್ ಅವರು ಉತ್ತೇಜನ ನೀಡಿದೋತಾಗುತ್ತಿದೆ ಎಂದು ಡಿಪೋ ಅಧಿಕಾರಿಗಳು ಈ ಬಗ್ಗೆ ದೂರನ್ನು ನೀಡಿದ್ದಾರೆ.
ಕೊಡಗು
ಪ್ಲಾನ್ ಮಾಡಿ ಹಣ ದೋಚುತ್ತಿದ್ದ ಖತರ್ನಾಕ್ ಮಹಿಳೆಯರ ಬಂಧನ
ಕುಶಾಲನಗರ ; ಮನೆಮನೆಗೆ ತೆರಳಿ ಕುಟುಂಬದ ಸಮಸ್ಯೆ ಪರಿಹಾರ ಮಾಡುವುದಾಗಿ ನಂಬಿಸಿ ಚಿನ್ನ, ಹಣ ದೋಚುತ್ತಿದ್ದ ಮಹಿಳೆಯರ ಬಂಧನವಾಗಿದೆ. ಲಕ್ಷ್ಮೀ, ವೇದವತಿ, ಸುಜಾತಾ ಬಂಧಿತ ಆರೋಪಿಗಳು.
ಮಹಿಳೆಯರ ಮನೆಗೆ ಹೋಗುವ ಈ ಮಹಿಳೆಯರು ನಿಮ್ಮ ಕುಟುಂಬದ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುವುದಾಗಿ ಹೇಳಿ ಅವರನ್ನು ನಂಬಿಸಿ. ಒಂದು ಪೆಟ್ಟಿಗೆಯ ಒಳಗೆ ಚಿನ್ನ ಮತ್ತು ಹಣ ಹಾಕುವುದಾಗಿ ಹೇಳುತ್ತಾರೆ. ನಂತರ ಜ್ಯೂಸ್ ಗೆ ಮತ್ತು ಬರುವ ಪುಡಿ ಬೆರೆಸಿ ಪ್ರಜ್ಞೆ ತಪ್ಪಿಸುತ್ತಿದ್ದರು. ಈ ಸಮಯದಲ್ಲಿ ಚಿನ್ನ ಹಣ ದೋಚಿ ಪರಾರಿಯಾಗುತ್ತಿದ್ದರು. ಈ ರೀತಿಯ ಹಲವಾರು ಪ್ರಕರಣಗಳು ಬಂದಾಗ ಡಿವೈಎಸ್ಪಿ ಶೈಲೇಂದ್ರ ಮತ್ತು ತಂಡದವರು ಕಾರ್ಯಾಚರಣೆ ನಡೆಸಿ ಮಹಿಳೆಯರನ್ನು ಬಂಧಿಸಿದ್ದಾರೆ.


0 Comments