ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಚೆನ್ನೈ ತಂಡ ಸೋಲನುಭವಿಸಿತ್ತು. ಸೋಲಿನ ಬೆನ್ನಲ್ಲೇ ಬೃಹತ್ ಮೊತ್ತದ ದಂಡ ವಿಧಿಸಲಾಗಿದೆ.

ವಾಂಖೆಡೆಯಲ್ಲಿ ಡೆಲ್ಲಿ ತಂಡದ ವಿರುದ್ಧ ಚೆನ್ನೈ ತಂಡ ನಿಧಾನಗತಿಯ ಬೌಲಿಂಗ್ ಮಾಡಿತ್ತು ಹಾಗೂ ಅತ್ಯಂತ ಕಡಿಮೆ ಓವರ್ ರೇಟ್ ಹೊಂದಿತ್ತು ಹೀಗಾಗಿ ನಾಯಕ ಧೋನಿಯವರಿಗೆ 12 ಲಕ್ಷದ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಂಡಳಿಯು ಹೇಳಿಕೆ ನೀಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಗೆ ಎರಡು ವರ್ಷಗಳ ನಂತರ ವಾಪಸಾದ ಸುರೇಶ್ ರೈನಾ ಅವರು ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲೇ ಸಿಕ್ಸರ್ ಗಳ ಮೂಲಕ ಅರ್ಧಶತಕ ಸಿಡಿಸಿ ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದಾರೆ.