ಬೆಂಗಳೂರಿನಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆಯ ಜಗದೀಶ್ (28) ಅವರು ಕೋವಿಡ್ ನಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಜಗದೀಶ್ ಅವರು ಕಳೆದ 4-5 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಬಳಿಕ ತಪಾಸಣೆ ವೇಳೆ ಕೊರೋನ ಸೋಂಕು ತಗುಲಿರುವುದು ಧೃಢವಾಗಿದೆ. ಜಗದೀಶ್ ಮೃತದೇಹವನ್ನು ಮೂಡಿಗೆರೆಯ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೋಣು, ಅಬ್ದುಲ್ ರೆಹನಾನ್, ಹಸೈನಾರ್ ಬಿಳುಗಳ, ಹಾಗೂ ಪೀಸ್ & ಅವೆರ್ನೆಸ್ ಟ್ರಸ್ಟ್ ಸ್ಥಾಪಕ ಅಲ್ತಾಫ್ ಬಿಳುಗಳ, ಸ್ನೇಕ್ ಆರೀಫ್ ಬಣಕಲ್, ಸುಲೈಮಾನ್ ಹ್ಯಾಂಡ್ ಪೋಸ್ಟ್ ಮುಂತಾದವರು ಸೇರಿ ಹೊಸಕೆರೆಯ ಸ್ಮಶಾಣದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.


0 Comments