ಬೇಲೂರು;ತಾಲ್ಲೂಕು ಜೆಡಿಎಸ್ ಆಯೋಜಿಸಿದ್ದ ಪುರಸಭೆ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್ ಮುಖಂಡ ಹೆಚ್ ಡಿ ರೇವಣ್ಣ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಬಂದನಂತರ ಪದೇ ಪದೇ ಇಂಧನದ ಬೆಲೆ ಏರಿಸುತ್ತಲೇ ಬಂದಿದ್ದಾರೆ.ನಾನು ಈ ಹಿಂದೆ ಇಂಧನ ಸಚಿವನಾಗಿದ್ದಾಗ ಜನಸಾಮಾನ್ಯರಿಗೆ ತೊಂದರೆ ಆಗುವಂತೆ ಇಂಧನದ ಬೆಲೆಯನ್ನು ಏರಿಸಿರಲಿಲ್ಲ.ಸಾಮಾನ್ಯ ಜನರ ಅಭಿವೃದ್ಧಿ ಕಡೆ ನಾನು ಆಸಕ್ತಿ ನೀಡಿದ್ದರಿಂದ ನನ್ನನ್ನು ಜನರು ಸೂಪರ್ ಸಿಎಂ ಎಂದೆಲ್ಲಾ ಕರೆದರು. ಪ್ರಸ್ತುತ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಮತ ಕೇಳುವ ನೈತಿಕ ಹಕ್ಕಿಲ್ಲ.ರಾಜ್ಯ ಬಿಜೆಪಿ ಸರ್ಕಾರ ಕಮಿಷನ್ ದಂಧೆಯಲ್ಲಿ ತೊಡಗಿದೆ ಎಂದೂ ಟೀಕಿಸಿದರು.
ನಂತರ ಹಾಸನ ಕ್ಷೇತ್ರದ ಚುನಾವಣೆಯ ಬಗ್ಗೆ ಮಾತನಾಡಿದ ರೇವಣ್ಣ ನಮ್ಮ ಪಕ್ಷದಲ್ಲಿ ಹಲವಾರು ನಿಷ್ಠಾವಂತ ಕಾರ್ಯಕರ್ತರಿದ್ದಾರೆ, ಹಾಸನದಲ್ಲಿ ಜೆಡಿಎಸ್ ಹೆಚ್ಚು ಪ್ರಬಲ ಪಕ್ಷವಾಗಿದೆ. ನಮ್ಮಲ್ಲಿ ನಿಷ್ಠಾವಂತರಿಗೆ ಟಿಕೆಟ್ ನೀಡಲಾಗುತ್ತದೆ. ಕಾರ್ಯಕರ್ತರು ಅವರ ಗೆಲುವಿಗೆ ಅವಿರತ ಶ್ರಮಿಸಬೇಕು ಎಂದು ಹೇಳಿದರು.


0 Comments