ಮಲೆನಾಡಿನ ಭಾಗವಾದ ಕೊಡಗಿನಲ್ಲಿ ಅಂತರ್ಜಲ ಮಟ್ಟ ಗಂಭೀರ ಕುಸಿತಕ್ಕೀಡಾಗಿದೆ ಎಂಬ ವಿಷಯ ಹೊರಬಿದ್ದಿದೆ. ಇದರ ಬಗ್ಗೆ ಜಿಲ್ಲಾಡಳಿತ ಎಚ್ಚುತ್ತುಕೊಳ್ಳದಿದ್ದರೆ ಸಮಸ್ಯೆ ಇನ್ನೂ ಉಲ್ಬಣವಾಗಬಹುದು. 

ಜಿಲ್ಲೆಯಲ್ಲಿ ಅಂತರ್ಜಲ ಬಳಸಿಕೊಂಡು ಕೆಲಸ ಮಾಡುವ ಕಾರ್ಖಾನೆಗಳೂ ಇಲ್ಲ, ನೀರಾವರಿಗಾಗಿ ಹೆಚ್ಚೇನೂ ಅಂತರ್ಜಲ ಬಳಕೆಯಾಗಿಲ್ಲ.ಆದರೂ ಸಹ ಈ ಮಟ್ಟದ ಇಳಿಕೆ ತಲೆಕೆಡಿಸುವಂತಿದೆ. ಕಳೆದ ಹತ್ತು ವರ್ಷಗಳಿಂದ ಸರಾಸರಿ ಅಂತರ್ಜಲ ಕುಸಿತ ಮಟ್ಟ 2.99 ಎಂದು ತಿಳಿಸಿದುಬಂದಿದೆ.

ಜನರಲ್ಲಿ ಸ್ವಚ್ಛತೆಯ ಅರಿವು ಇಲ್ಲದಿರುವುದು, ಉತ್ತಮ ಮಳೆ ಇಲ್ಲದಿರುವುದು, ಗಡಸುತನ, ಹೆಚ್ಚಿದ ಜನವಸತಿ ಪ್ರದೇಶವೇ ಇದಕ್ಕೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.