ಕರ್ನಾಟಕ ಸರ್ಕಾರ ತಂದಿರುವ ಹೊಸ ಮಾರ್ಗಸೂಚಿಯಂತೆ ಇಂದಿನಿಂದ ಮೇ 4 ನೇ ತಾರೀಖಿನವರೆಗೂ ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಭಕ್ತಾದಿಗಳಿಗೆ ನಿಷೇಧಿಸಲಾಗಿದೆ ಎಂದು ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತಾಧಿಕಾರಿ ಜಿ. ಭೀಮೇಶ್ವರ ಜೋಷಿ ಅವರು ತಿಳಿಸಿದ್ದಾರೆ.
ಶ್ರೀ ಮಾತೆಯ ಮಂಗಳಾರತಿಯ ನೇರ ಪ್ರಸಾರವನ್ನು ದೇವಸ್ಥಾನದ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಲು ಅವಕಾಶ ಕಲ್ಪಿಸಲಾಗಿದೆ, ಭಕ್ತಾದಿಗಳು ಆನ್ ಲೈನ್ ಮೂಲಕವೇ ದೇವರ ದರ್ಶನ ಮಾಡಿಕೊಂಡು, ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ, ಮಾಸ್ಕ್ ಹಾಗು ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನ ವೈರಸ್ ಹರಡುವುದನ್ನು ನಿಲ್ಲಸಬೇಕು. ಈ ಎಲ್ಲಾ ಸಮಸ್ಯೆಗೆ ಆದಷ್ಟು ಬೇಗ ಶ್ರೀಮಾತೆ ಅನ್ನಪೂರ್ಣೇಶ್ವರಿ ಪರಿಹಾರ ಕೊಡಲಿ ಎಂದು ಬೇಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.


0 Comments