ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲೂ ಯಥಾವತ್ತಾಗಿ ಲಾಕ್ ಡೌನ್ ನಿಯಮ ಜಾರಿಗೆ ತರಲಾಗುತ್ತದೆ, ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ವೀಕೆಂಡ್ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಿ ಆದೇಶಗೊಳಿಸಿದ್ದು. ಅಗತ್ಯ ಸೇವೆಗಳಾದ ಆಸ್ಪತ್ರೆ, ಮೆಡಿಕಲ್, ದಿನಸಿ ಅಂಗಡಿಗಳು, ಹಣ್ಣು ತರಕಾರಿ, ಹಾಲು ಮಾರಲು ಅವಕಾಶ ನೀಡಲಾಗಿದ್ದು. ಮೀನು ಹಾಗೂ ಮಾಂಸದ ಅಂಗಡಿಗಳಿಗೆ ಲಾಕ್ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ನೈಟ್ ಕರ್ಫ್ಯೂ ಮಾತ್ರ ಜಾರಿಯಲ್ಲಿ ಇರುತ್ತದೆ.
ಮೇ 4ನೇ ತಾರೀಖಿನವರೆಗೂ ಜಿಲ್ಲೆಯ ಸಂಪೂರ್ಣ ಲಾಕ್ಡೌನ್ ಕುರಿತು ಯಾವುದೇ ನಿರ್ಧಾರವನ್ನು ಜಿಲ್ಲಾಡಳಿತದ ವತಿಯಿಂದ ಕೈಗೊಂಡಿಲ್ಲ, ಮುಂದೆ ಸರ್ಕಾರದ ವತಿಯಿಂದ ಪರಿಷ್ಕೃತ ಮಾರ್ಗಸೂಚಿ ಬಂದಲ್ಲಿ ಅದರ ಪ್ರಕಾರ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ನ್ಯೂಸ್ ಮಲ್ನಾಡ್ ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಮಾಹಿತಿ ನೀಡಿದರು.


0 Comments