ಚಿಕ್ಕಮಗಳೂರು: ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ದಿನೇ ದಿನೇ ಸಾವಿನ ಸಂಖ್ಯೆ ಮಿತಿ ಮೀರುತ್ತಿದೆ. ಸರ್ಕಾರವನ್ನು ಒಗ್ಗಟ್ಟಿನಿಂದ ನಡೆಸಬೇಕಾದ ಸಚಿವರ ನಡುವೆಯೇ ಸಮನ್ವಯತೆ ಇಲ್ಲವಾಗಿದೆ. ಈಗ ಅಘೋಷಿತ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ. ಹೊರರಾಜ್ಯಗಳಿಂದ ಬರುತ್ತಿರುವವರಿಗೆ ಯಾವುದೇ ನಿರ್ಭಂದ ಹೇರಿಲ್ಲ, ಇದು ವಿಫಲ ಆಡಳಿತ. ಮತ್ತೊಂದೆಡೆ ರಾಜ್ಯದ ಪ್ರಮುಖ ಸಚಿವ ಶ್ರೀರಾಮುಲು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಕೊರೋನಾ ನಿರ್ವಹಣೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಸಂಪೂರ್ಣ ವಿಫಲವಾಗಿದ್ದು ಈ ಅನಾಹುತಕ್ಕೆ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್. ಹೆಚ್ ದೇವರಾಜ್ ಒತ್ತಾಯಿಸಿದರು.