ಚಿಕ್ಕಮಗಳೂರು :ರಸಗೊಬ್ಬರಗಳನ್ನು ಖರೀದಿ ಮಾಡುವ ರೈತರಿಗೆ ಚಿಕ್ಕಮಗಳೂರಿನ ಜಂಟಿ ಕೃಷಿ ನಿರ್ದೇಶಕರಾದ ಡಾ. ಎಂ ತಿರುಮಲೇಶರವರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. 

ಜಿಲ್ಲೆಯ ಯಾವುದೇ ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಚೀಲದ ಮೇಲೆ ನಮೂದಿಸಿರುವ ಎಂ.ಆರ್.ಪಿ. ದರಗಳಿಗಿಂತ  ಹೆಚ್ಚಿನ ದರದಲ್ಲಿ  ಮಾರಾಟ ಮಾಡಿದಲ್ಲಿ ತಪ್ಪದೆ ಹತ್ತಿರದ ರೈತ ಸಂಪರ್ಕ ಕೇಂದ್ರ/ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಗಳನ್ನು ಸಂಪರ್ಕಿಸಿ ದೂರು ನೀಡಲು ಸೂಚಿಸಿದ್ದಾರೆ. 

ಯಾವುದೇ ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಮಾರಾಟ ದರಗಳು ಏಪ್ರಿಲ್ ಒಂದರಿಂದ ಏರಿಕೆಯಾಗಿದೆ ಎಂಬ  ನೆಪವೊಡ್ಡಿ ಎಂ.ಆರ್.ಪಿ. ದರಗಳಿಗಿಂತ ಹೆಚ್ಚಿನ ದರದಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ರಸಗೊಬ್ಬರಗಳನ್ನು ಮಾರಾಟ ಮಾಡುವಂತಿಲ್ಲ. ಆದುದರಿಂದ ಎಲ್ಲ ರೈತ ಬಾಂಧವರು ಜಾಗರೂಕತೆಯಿಂದ ರಸಗೊಬ್ಬರ ಚೀಲದ ಮೇಲೆ ನಮೂದಿಸಿರುವ ಎಂಆರ್ ಪಿ ದರದಲ್ಲಿಯೇ ರಸಗೊಬ್ಬರಗಳನ್ನು ಖರೀದಿಸಲು ಕೋರಿ ಆದೇಶ ಹೊರಡಿಸಿದ್ದಾರೆ