ಶಿವಮೊಗ್ಗ: ಕರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ರಾತ್ರಿ 9 ರಿಂದ ಬೆಳಗ್ಗೆ 6ರವರೆಗೂ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಲು ಮುಂದಾಗಿದೆ. ಹೊಸ ಮಾರ್ಗಸೂಚಿ ಅನುಸಾರ ಶಿವಮೊಗ್ಗ ಜಿಲ್ಲಾ ಡೀಲರ್ಸ್ ಪೆಟ್ರೋಲಿಯಮ್ ಅಸೋಸಿಯೇಷನ್ ಕರ್ಫ್ಯೂ ಅವಧಿಯಲ್ಲಿ ಪೆಟ್ರೊಲ್ ಬಂಕ್ ಕಾರ್ಯ ಚಟುವಟಿಕೆ ಬಂದ್ ಮಾಡಲು ನಿರ್ಧರಿಸಿದೆ.
ಪ್ರತಿ ದಿನ ಬೆಳಗ್ಗೆ 6 ರಿಂದ ರಾತ್ರಿ 8ರ ವರೆಗೂ ಪೆಟ್ರೋಲ್ ಬಂಕ್ ಕಾರ್ಯ ನಿರ್ವಹಿಸಲಿದ್ದು, ಶನಿವಾರ ಹಾಗೂ ಭಾನುವಾರ ಸಂಪೂರ್ಣ ಚಟುವಟಿಕೆ ಸ್ಥಗಿತಗೊಳಿಸಲು ಶಿವಮೊಗ್ಗ ಜಿಲ್ಲಾ ಅಸೋಸಿಯೇಷನ್ ನಿರ್ಧರಿಸಿದೆ. ರಾತ್ರಿ 8ಕ್ಕೆ ಬಂದ್ ಮಾಡುವುದರಿಂದ ಪೆಟ್ರೋಲ್ ಬಂಕ್‍ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಒಂದು ಗಂಟೆ ಅವಧಿಯಲ್ಲಿ ಮನೆ ತಲುಪಲು ಸಾಧ್ಯವಾಗಲಿದೆ. ಆದ್ದರಿಂದ ಕರ್ಫ್ಯೂ ಅವಧಿಯ ಒಂದು ಗಂಟೆ ಮೊದಲೇ ಪೆಟ್ರೋಲ್ ಬಂಕ್ ಬಂದ್ ಮಾಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಡೀಲರ್ಸ್ ಪೆಟ್ರೋಲ್ ಅಸೋಸಿಯೇಷನ್ ಕಾರ್ಯದರ್ಶಿ ಡಿ.ಎಸ್.ಅರುಣ್ ತಿಳಿಸಿದ್ದಾರೆ.


0 Comments