ಮಾಧ್ಯಮಗಳನ್ನೂ ಒಳಗೊಂಡತೆ ವಿರೋಧ ಪಕ್ಷಗಳು ಸಹ ಸಿ.ಡಿ ಚರ್ಚೆಯಲ್ಲಿ ನಿರತರಾಗಿದ್ದರೇ ಹೊರತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿಲ್ಲ. ವಿರೋಧ ಪಕ್ಷದ ನಾಯಕರು ಈಗ ಎಲ್ಲವನ್ನೂ ಸರ್ಕಾರದ ಮೇಲೆ ಹಾಕುವುದು ಸರಿಯಲ್ಲ.
ಸಿ.ಡಿ ಚರ್ಚೆ ಮಾಡುವ ಸಮಯದಲ್ಲಿ ಸರ್ಕಾರಕ್ಕೆ ಸಲಹೆ ನೀಡಿ ನಿಯಂತ್ರಣಕ್ಕೆ ತರಬೇಕು ಎಂಬ ಒತ್ತಡ ಹೇರಿದ್ದರೆ ಇಂದು ಟೀಕಿಸುವುದಕ್ಕೆ ನೈತಿಕತೆ ಇರುತ್ತಿತ್ತು ಎಂದು ಹೇಳಿದರು.
ಕೊರೋನಾ ನಂತರದ ವೈಫಲ್ಯಗಳನ್ನು ಬೆಟ್ಟುಮಾಡಿ ತೋರಿಸಲಿ, ಅಂತಹ ಸಲಹೆಗಳಿದ್ದರೆ ಸ್ವೀಕರಿಸುತ್ತೇವೆ ಎಂದರು.
ಇದಕ್ಕೂ ಮೊದಲು ಪಿಪಿಇ ಕಿಟ್ ಧರಿಸಿ ಜಿಲ್ಲಾ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳಿಗೆ ಧೈರ್ಯ ತುಂಬಿದರು. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಸಮರ್ಪಕ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು



0 Comments