ಚಿಕ್ಕಮಗಳೂರು
➤ ಸೂರ್ಳಿ ಗಣೇಶಮೂರ್ತಿ ಅವರಿಗೆ ನಾಗರಿಕ ಸನ್ಮಾನ!
ಹರಿಹರಪುರ : ಕಲಾಶ್ರೀ ಪುರಸ್ಕೃತ ವಿದ್ವಾನ್ ಸೂರ್ಳಿಯ ಆರ್ ಗಣೇಶಮೂರ್ತಿ ಅವರಿಗೆ ಹರಿಹರಪುರದ ಅ.ರಾ. ಸ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಾಳೆ (3 ಏಪ್ರಿಲ್ 2021) ಸಂಜೆ 5 ಗಂಟೆಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾದ ತಲವಾನೆ ಪ್ರಕಾಶ್ ಅವರು ತಿಳಿಸಿದ್ದಾರೆ. ಶ್ರೀಯುತ ಗಣೇಶಮೂರ್ತಿ ಅವರು ಹರಿಹರಪುರ ಮಠದ ಆಸ್ಥಾನ ಕಲಾವಿದರಾಗಿ ಸತತ ಐದು ವರ್ಷಗಳಿಂದ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ತ್ಯಾಗರಾಜರ ಆರಾಧನಾ ಮಹೋತ್ಸವವವನ್ನು ಸತತ 39 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದ ಕೀರ್ತಿ ಇವರಿಗೆ ಸಲ್ಲುತ್ತದೆ.ನಾದ ಗಂಭೀರ, ಸಂಗೀತ ಕಲಾ ತಪಸ್ವಿ, ಕಲಾ ದೀಪ್ತಿ, ನಾದಶ್ರೀ ಮುಂತಾದ ಬಿರುದುಗಳು ಹಾಗೂ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
➤ ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರಿಗೆ ಕೊರೋನ ಟೆಸ್ಟ್ ಖಡ್ಡಾಯ!
ಚಿಕ್ಕಮಗಳೂರು : ಕೊರೋನ ಎರಡನೇ ಅಲೇ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಕೊರೋನ ಟೆಸ್ಟ್ ಖಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ತಾಲೂಕಿನ ಕೈಮರ ಪೋಸ್ಟ್ ಬಳಿ ಚೆಕ್ ಪೋಸ್ಟ್ನಲ್ಲಿ ಮುಳ್ಳಯನಗಿರಿ, ದತ್ತಪೀಠ, ಮಾಣಿಕ್ಯದಾರ, ಕೆಮ್ಮಣ್ಣುಗುಂಡಿ, ಸೀತಾಳಯ್ಯನಗಿರಿ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರಿಗೆ ಕೊರೋನ ಟೆಸ್ಟ್ ನಡೆಸುತ್ತಿದೆ. ಹೊರ ಜಿಲ್ಲೆ ಹಾಗು ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ರ‍್ಯಾಪಿಡ್ ಟೆಸ್ಟ್ ನಡೆಸಿ ಒಳಬಿಡಲಾಗುತ್ತಿದೆ. ಪರೀಕ್ಸೆಗೆ ಒಳಪಡದ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದೆ.ಶಿವಮೊಗ್ಗ
➤ ನದಿಯಲ್ಲಿ ಈಜಲು ಹೋಗಿದ್ದ ತೀರ್ಥಹಳ್ಳಿಯ ವಕೀಲ ಸಾವು, ಫೇಸ್ಬುಕ್ ಪೋಸ್ಟ್ ವೈರಲ್!
ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ಹೋಗಿದ್ದ ವಕೀಲರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಶಾವತಿ ಪಾರ್ಕ ಹಿಂಭಾಗ ನಡೆದಿದೆ. ತೀರ್ಥಹಳ್ಳಿ ಜೆಎಂಎಫ್‌ಸಿ ಕೋರ್ಟನಲ್ಲಿ ವಕೀಲರಾಗಿದ್ದ ಸಂದೇಶ್ ಕುಮಾರ್ ಮೃತರು. ನಿನ್ನೆ (ಗುರುವಾರ) ಅವರು ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಏಪ್ರಿಲ್ ೧ ೨೦೨೦ರಂದು ಸಂದೇಶ್ ತಮ್ಮ ಫೇಸ್ ಬುಕ್ ನಲ್ಲಿ ನದಿಯಲ್ಲಿ ತೆಗೆಸಿದ್ದ ಫೋಟೋ ಒಂದನ್ನು ಹಾಕಿ "ನೀರು ಬಿಟ್ಟು ಮೇಲೆ ಬರೋಕೆ ಮನಸ್ ಆಗಲ್ಲ' ಎಂದು ಪೋಸ್ಟ್ ಮಾಡಿದ್ದರು ಈ ವರ್ಷ ಅದೇ ಏಪ್ರಿಲ್ ೧ರಂದೇ ನದಿಯಲ್ಲಿ ಮುಳುಗಿ ಮೃತರಾಗಿದ್ದು ಅವರು ಮಾಡಿದ್ದ ಪೋಸ್ಟ್ ವೈರಲ್ ಆಗಿದೆ.
➤ ಶಿವಮೊಗ್ಗದಲ್ಲಿ ಕೊರೋನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ, ಒಂದು ವಾರದಲ್ಲೇ 1.6 ಲಕ್ಷ ದಂಡ ವಸೂಲಿ
ಶಿವಮೊಗ್ಗ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ಪ್ರಕರಣಗಳು ವ್ಯಾಪಕವಾಗಿದ್ದು ಜಿಲ್ಲೆಯಲ್ಲಿ ಕಟ್ಟುನಿಟಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದ್ದಾರೆ. ಸಂತೆ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಬಸ್ ಸ್ಟ್ಯಾಂಡ್, ಕಲ್ಯಾಣ ಮಂಟಪ ಮುಂತಾದ ಕಡೆಗಳಲ್ಲಿ ಜನರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಧಂಡ ವಿಧಿಸಲಾಗುವುದು, ಕಳೆದ ಒಂದು ವಾರದಲ್ಲಿ ೧೦೧೬ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಒಟ್ಟು ೧.೬ ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ೨೨೦೦ ಮಂದಿಯ ಕೊರೋನ ಟೆಸ್ಟ್ ನಡೆಸಲಾಗುತ್ತಿದ್ದು ನೂರರಲ್ಲಿ ೧.೧% ನಷ್ಟು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹಾಸನ
➤ ಎರಡೂ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಗೋಪಾಲಯ್ಯ!
ಹಾಸನ : ಜಿಲ್ಲೆಯ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಅವರು ಲೋಕಸಭೆ ಮತ್ತು ವಿಧಾನಸಭೆಯ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜಕೀಯದಲ್ಲಿ ಸುದ್ದಿಯಲ್ಲಿದ್ದರುವ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಸಿಡಿಲೇಡಿಗೂ ಉಪಚುನಾವಣೆಗೂ ಸಹ ಯಾವುದೇ ಸಂಬಂಧವಿಲ್ಲ, ಇನ್ನು ಈ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ಹಾಸನ ಜಿಲ್ಲೆಯಲ್ಲಿ ಜೀತ ಪದ್ಧತಿಯಿಂಥ ವಿರಕ್ತಿ ಪಡೆದವರ ಜಮೀನು ತೆರವು ಕುರಿತಾಗಿ ಜಿಲ್ಲಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಪಕ್ಷ ಕೊಟ್ಟಿರುವ ಸ್ಥಾನಮಾನ ಕಾಪಾಡಿಕೊಂಡು ಹೋಗುತ್ತೇನೆ ಎಂದರು.
➤ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಅಧಿವೇಶನದಲ್ಲಿ ಹೋರಾಟ ಮಾಡುವೆ ; ಪ್ರಜ್ವಲ್ ರೇವಣ್ಣ
ಬೇಲೂರು : ನಡೆದಾಡುವ ದೇವರು ಎಂದೇ ಜನರ ಮನದಲ್ಲಿ ದೇವರಾಗಿದ್ದ ಸಿದ್ದಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ಗೌರವ ನೀಡಲು ಅಧಿವೇಶನದಲ್ಲಿ ಹೋರಾಟ ಮಾಡುವುದು ನನ್ನ ಬದ್ಧತೆ ಎಂದು ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. ತ್ರಿವಿಧ ದಾಸೋಹಿಗಳೂ ಹಾಗೂ ಬಸವಣ್ಣನವರ ಕಾಯಕವೇ ಕೈಲಾಸ ಎಂಬುದನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡು ಮಠವನ್ನು ಯಾವ ಧರ್ಮದ ಪರವಾಗಿಯೂ ಸ್ಥಾಪಿಸದೇ ಸರ್ವಧರ್ಮಗಳ ಉನ್ನತಿಗಾಗಿ ಶ್ರಮಿಸಿದವರು ಎಂದರು.


0 Comments