ಚಿಕ್ಕಮಗಳೂರು
ಚಿಕ್ಕಮಗಳೂರಿನಲ್ಲೊಂದು ಮಾದರಿ ಪ್ರೇಮಕಥೆ!
ಬರೀ ಆಸ್ತಿ ಹಾಗು ಟೈಂ ಪಾಸ್ ಗಾಗಿ ಪ್ರೀತಿ ಮಾಡುವ ಈ ಕಾಲದಲ್ಲಿ ಚಿಕ್ಕಮಗಳೂರಿನ ಈ ಪ್ರೇಮಿಗಳು ನಿರ್ಮಾಲವಾದ ಪ್ರೀತಿಗೆ ಸಾಕ್ಷಿಯಾಗಿದ್ದಾರೆ. ಈ ಆದರ್ಶ ಪ್ರೇಮಿಗಳ ಹೆಸರು ಸ್ವಪ್ನ ಮತ್ತು ಮನು. ಚಿಕ್ಕಮಗಳೂರಿನ ಭಕ್ತರಹಳ್ಳಿ ನಿವಾಸಿಗಳಾಗಿದ್ದಾರೆ. ಸ್ವಪ್ನ ಮೊದಲು ಚೆನ್ನಾಗಿಯೇ ಇದ್ದರು. ಒಮ್ಮೆ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಒಮ್ಮೆಲೇ ಕುಸಿದು ಬಿದ್ದು ತಮ್ಮ ಕಾಲಿನ ಸ್ವಾಧೀನ ಕಳೆದುಕೊಂಡರು. ಯಾವ ಔಷಧಿ ಆಸ್ಪತ್ರೆಗಳೂ ಸಹ ಇವರ ಕಾಲನ್ನು ಸರಿ ಮಾಡುವಲ್ಲಿ ಯಶಸ್ವಿಯಾಗಲಿಲ್ಲ.ನನ್ನ ಮದುವೆಯಾಗಿ ಏನು ಪ್ರಯೋಜನ ಎಂದು ಸ್ವಪ್ನ ತನ್ನ ಪ್ರೇಮಿಗೆ ಹೇಳಿದ್ದರು.ಆದರೆ ಮನು ತನ್ನ ಪ್ರೀತಿಯನ್ನು ಮರೆಯದೇ ಸ್ವಪ್ನ ಅವರನ್ನೇ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸ್ವಪ್ನ ಅವರನ್ನು ವೀಲ್ ಚೇರ್ ನಲ್ಲಿ ಕೂರಿಸಿಕೊಂಡೇ ತಾಳಿ ಕಟ್ಟಿ ಮದುವೆಯಾದರು. ಈ ನಿಷ್ಕ್ಕಲ್ಮಷ ಪ್ರೀತಿ ಎಲ್ಲರಿಗೂ ಮಾದರಿಯಾಗಲಿ ಹಾಗೂ ಈ ನವಜೋಡಿಯ ಜೀವನ ಸುಖಮಯವಾಗಿರಲಿ ಎಂದು ಆಶಿಸೋಣ
ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಕೊರೋನಾ ಸೋಂಕು
ರಾಜ್ಯಾದ್ಯಂತ ಕೊರೋನಾ ಎರಡನೇ ಅಲೆ ಎಬ್ಬಿದ್ದು ಸರ್ಕಾರ ಆದಷ್ಟು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದೆ. ಕಾಕಿನಾಡ ಚಿಕ್ಕಮಗಳೂರಿನಲ್ಲಿ ಒಟ್ಟು 51ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ತರೀಕೆರೆ ತಾಲ್ಲೂಕಿನಲ್ಲಿ 26,ಕಡೂರು 10,ಚಿಕ್ಕಮಗಳೂರು 7,ಮೂಡಿಗೆರೆ 8, ಚಿಕ್ಕಮಗಳೂರಿನಲ್ಲಿ 7 ಕೊರೋನ ಕೇಸ್ ಪತ್ತೆಯಾಗಿದೆ. ಒಟ್ಟಾರೆ ಚಿಕ್ಕಮಗಳೂರಿನಲ್ಲಿ 166 ಸಕ್ರಿಯ ಕೊರೋನಾ ಪ್ರಕರಣಗಳು ಇವೆ ಎಂಬ ಮಾಹಿತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಸರ್ವೇಕ್ಷಣಾಧಿಕಾರಿಯಾದ ಡಾ. ಹೆಚ್. ಕೆ ಮಂಜುನಾಥ್ ತಿಳಿಸಿದ್ದಾರೆ.
ಕೊಡಗು
ಅಕ್ರಮವಾಗಿ ಲಾಟರಿ ದಂಧೆ ಮಾಡುತ್ತಿದ್ದವರ ಬಂಧನ
ಕೊಡಗು/ವಿರಾಜಪೇಟೆ :ವಿರಾಜಪೇಟೆಯಲ್ಲಿ ಲಾಟರಿ ಮಾರುತ್ತಿದ್ದ ಚಂದ್ರ ಮತ್ತು ಅಬೂಬಕರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕೇರಳ ಮೂಲದ ಲಾಟರಿಯನ್ನು ಮಾಡುತ್ತಿದ್ದುರು ಎಂದು ತಿಳಿದುಬಂದಿದೆ. ಸಿ. ಪಿ. ಐ ಶ್ರೀಧರ್ ಅವರ ನೇತೃತ್ವದಲ್ಲಿ ನಡೆಸಿದ ಈ ಕಾರ್ಯಚರಣೆಯಲ್ಲಿ ಆರೋಪಿಗಳ ಬಳಿಯಿದ್ದ 43,760 ಮೌಲ್ಯದ ಲಾಟರಿ ಟಿಕೆಟ್ ಮತ್ತು ಕೆಲವು ಲಾಟರಿ ಮಾರಿದಾಗ ಬಂದ 1,690 ರೂಗಳಷ್ಟು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಕೋಟೆಬೆಟ್ಟ ಸರಹದ್ದಿನ ಅರಣ್ಯಕ್ಕೆ ಬೆಂಕಿ
ಕೊಡಗು /ಸೋಮವಾರಪೇಟೆ :ಸೋಮವಾರಪೇಟೆ ತಾಲ್ಲೂಕಿನ ಕೋಟೆಬೆಟ್ಟ ಸರಹದ್ದಿನ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು ಇನ್ನೂ ಅಗ್ನಿದಮನ ಕಾರ್ಯ ಸಫಲಗೊಂಡಿಲ್ಲ. ಬಿಸಿಲಿನ ಧಗೆಗೆ ಬೆಂಕಿ ಇನ್ನೂ ಆವರಿಸುವ ಸಾಧ್ಯತೆಯಿದೆ. ಸುಮಾರು 1,200 ಎಕರೆಯಷ್ಟು ಜಾಗಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಒಂದು ವೇಳೆ ತೀವ್ರತೆ ಹೆಚ್ಚಾಗಿ ಬೆಂಕಿ ತನ್ನ ಕೆನ್ನಾಲಿಗೆ ಚಾಚಿದರೆ ಅನೇಕ ಪ್ರಾಣಿಸಂಕುಲಗಳ ನಾಶವಾಗುವ ಸಾಧ್ಯತೆಯಿದೆ. ಶನಿವಾರವೂ ಸಹ ಬೆಂಕಿ ನಂದಿಸುವ ಕಾರ್ಯ ಮುಂದುವರೆಯಲಾಗುತ್ತದೆ ಎಂದು ಮಾದಾಪುರದ ಉಪವಲಯ ಅರಣ್ಯಾಧಿಕಾರಿ ಜಗದೀಶ್ ಹೇಳಿದ್ದಾರೆ.
ಶಿವಮೊಗ್ಗ
"ಯಡಿಯೂರಪ್ಪ ವಿರುದ್ಧ ಅಸಮಾಧಾನ ಇಲ್ಲ"ಈಶ್ವರಪ್ಪ
ಶಿವಮೊಗ್ಗ : ಯಡಿಯೂರಪ್ಪ ವಿರುದ್ಧ ರಾಜ್ಯಪಾಲರ ಬಳಿ ದೂರು ಸಲ್ಲಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಬಗ್ಗೆ ರಾಜ್ಯಪಾಲರು ಬಳಿ ಚರ್ಚೆಗೆ ತೆರಳಿದ್ದೆ. ನನಗೂ ಯಡಿಯೂರಪ್ಪ ಅವರ ವಿರುದ್ಧ ಯಾವುದೇ ಅಸಮಾಧಾನ ಇಲ್ಲವೇ ಇಲ್ಲ. ವಿರೋಧ ಪಕ್ಷದವರು ಇದನ್ನು ಸ್ವಲ್ಪ ಮಹತ್ವದ ವಿಷಯ ಎಂಬಂತೆ ಬಿಂಬಿಸುತ್ತಿದ್ದಾರೆ. ನಾನು ಇಲಾಖೆಯ ವಿಚಾರವಾಗಿ ಚರ್ಚಿಸಲು ರಾಜ್ಯಪಾಲರು ಏನು, ದೆಹಲಿಗು ಹೋಗಬೇಕಾದರೆ ಹೋಗ್ತೀನಿ. ನನ್ನ ಹಾಗು ಮುಖ್ಯಮಂತ್ರಿಗಳ ನಡುವೆ ಯಾವದೇ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದರು.
ಮಧು ಬಂಗಾರಪ್ಪ ಬೆಂಬಲಿಗರೂ ಕಾಂಗ್ರೆಸ್ ಸೇರ್ಪಡೆ
ಶಿವಮೊಗ್ಗ : ಇತ್ತೀಚೆಗೆ ಜೆಡಿಎಸ್ ಮುಖಂಡ ಮಧುಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇದರ ಬಗ್ಗೆ ಮಾತನಾಡಿದ ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಿ. ಡಿ ಮಂಜುನಾಥ್ ಮಾತನಾಡಿ "ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆ ನಡೆಯನ್ನು ಬೆಂಬಲಿಸಿ ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ" ಎಂದು ಹೇಳಿದರು.ಅಲ್ಲದೇ " ಬಿಜೆಪಿ ಪ್ರಬಲವಾಗಿರುವ ಈ ಸಮಯದಲ್ಲಿ ಜಾತ್ಯತೀತ ಪಕ್ಷಗಳಿಗೆ ಹಿನ್ನಡೆಯಾಗುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾದ್ದರಿಂದ ಅದಕ್ಕೆ ಬಲ ತುಂಬಲು ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಬಹುತೇಕ ಜೆಡಿಎಸ್ ಮುಖಂಡರು ಪಕ್ಷ ತೊರೆಯುತ್ತಿದ್ದಾರೆ. ಇಲ್ಲಿಯವರೆಗೂ ಜೆಡಿಎಸ್ ಪಕ್ಷದಲ್ಲಿ ಸಹಕಾರ ನೀಡಿದವರಿಗೆ ಧನ್ಯವಾದಗಳು" ಎಂದು ಹೇಳಿದರು.
ಹಾಸನ
ಕಾಲೇಜು ಪ್ರಚಾರ್ಯೆ ಮೇಲೆ ದೂರು ದಾಖಲಿಸಿದ ವಿದ್ಯಾರ್ಥಿ
ಹಾಸನ ;ಹಾಸನದ ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಚಾರ್ಯೆ ಶೋಭಾ ದೇವಮಾನೆ ವಿರುಧ್ಧ ಎಫ್ ಐ ಆರ್ ದಾಖಲಾಗಿದೆ. ವಿಜಾಪುರದ ವಿದ್ಯಾರ್ಥಿಯಾದ ಚನ್ನಯ್ಯ ಅವರು ಪ್ರಾಚಾರ್ಯೆಯ ವಿರುದ್ಧ ದೂರು ನೀಡಿದ್ದಾರೆ. ವಿದ್ಯಾರ್ಥಿಯ ದೂರಿನ ಪ್ರಕಾರ ಪ್ರಾಚಾರ್ಯೆ ಉತ್ತರ ಪತ್ರಿಕೆಯಲ್ಲಿನ ಸರಿಯುತ್ತರಗಳನ್ನು ಉದ್ದೇಶಪೂರ್ವಕವಾಗಿ ಹೊಡೆದುರುಹಾಕಿದ್ದಾರೆ. ಪ್ರಥಮ ಮತ್ತು ದ್ವಿತೀಯ ವರ್ಷದ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದನು ಆದರೆ ಅಂತಹ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ. ಉತ್ತರ ಪತ್ರಿಕೆಯ ಪ್ರತಿಯನ್ನು ತರಿಸಿಕೊಂಡು ನೋಡಿದಾಗ ಸರಿಯಾದ ಉತ್ತರವನ್ನು ಬೇಕೆಂದೇ ಹೊಡೆದುಹಾಕಿದ್ದಾರೆ ಎಂದು ದೂರಿದ್ದಾನೆ. ಈ ಘಟನೆಯ ನಂತರ ಪ್ರಚಾರ್ಯೆ ಶೋಭಾ ದೇವಮಾನೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ.
ದೇವೇಗೌಡ ಕುಟುಂಬದ ಶೀಘ್ರ ಚೇತರಿಕೆಗಾಗಿ ಜೆಡಿಎಸ್ ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ
ಹಾಸನ ;ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಅವರ ಶೀಘ್ರ ಚೇತರಿಕೆಗಾಗಿ ಹಾಸನ ಜಿಲ್ಲಾ ಜೆಡಿಎಸ್ ವತಿಯಿಂದ ಶುಕ್ರವಾರ ನಗರದ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಶೀಘ್ರ ಚೇತರಿಕೆಗಾಗಿ ಈಡಾಗಾಯಿ ಒಡೆದರು. ನಂತರ ನಗರದ ಆಜಾದ್ ರಸ್ತೆಯಲ್ಲಿರುವ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಯನ್ನೂ ಸಹ ಸಲ್ಲಿಸಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ದ್ವಾವೇಗೌಡ ಮಾತನಾಡಿ "ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇವೇಗೌಡ ದಂಪತಿಗಳು ಶೀಘ್ರ ಗುಣಮುಖರಾಗಬೇಕೆಂದು ಇಂದು ದೇವಸ್ಥಾನ ಹಾಗು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ. ದೇವರು ಆದಷ್ಟು ಬೇಗ ಅವರಿಗೆ ಆರೋಗ್ಯದಲ್ಲಿ ಚೇತರಿಕೆ ನೀಡಿ ರಾಜಕೀಯದಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿಯನ್ನು ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಉತ್ತರ ಕನ್ನಡ
ಈಶ್ವರಪ್ಪ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು ಸಚಿವ ಶಿವರಾಮ ಹೆಬ್ಬಾರ್
ಉತ್ತರಕನ್ನಡ /ಗೋಕರ್ಣ :ಗೋಕರ್ಣದ ಗಂಗೆಕೊಳ್ಳದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಈಶ್ವರಪ್ಪ ವಿರುದ್ಧ "ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರ ಬಳಿ ದೂರು ನೀಡಿದ್ದು ಖಂಡನಾರ್ಹ ನಡೆ ಆಗಿದೆ. ಇಬ್ಬರೂ ಒಂದೇ ಜಿಲ್ಲೆಯವರು ಹಾಗು ಹಿರಿಯರು. ಸಮಸ್ಯೆ ಬಗೆಹರಿಸಲು ಇನ್ನು ಬೇರೆ ದಾರಿಗಳಿದ್ದವು. ಇದೆಲ್ಲವನ್ನು ಮರೆತು ರಾಜ್ಯಪಾಲರ ವಿರುದ್ಧವೇ ದೂರು ನೀಡಿದ್ದು ಸರಿಯಲ್ಲ. ಇದರಿಂದ ವಿರೋಧ ಪಕ್ಷದವರಿಗೆ ಸರ್ಕಾರದ ವಿರುದ್ಧ ಮಾತನಾಡಲು ದಾರಿ ಮಾಡಿಕೊಟ್ಟ ಹಾಗಾಗಿದೆ "ಎಂದರು
ತಿಂಗಳ ವೇತನದಿಂದ ಶಾಲೆಯ ದುರಸ್ತಿ ಕಾರ್ಯ ಮಾಡಿಸಿದ ಶಿಕ್ಷಕ
ಉತ್ತರ ಕನ್ನಡ /ಯಲ್ಲಾಪುರ ;ತಮ್ಮ ತಿಂಗಳ ವೇತನದಿಂದ ಶಾಲೆಯಲ್ಲಿ ಹಾಳಾಗಿದ್ದ ಧ್ವಜಕಟ್ಟೆ, ಆವರಣದವ್ಲಿರುವ ಗೋಡೆಯ ದುರಸ್ತಿ ಮಾಡಿ, ಅದಕ್ಕೆ ಸುಣ್ಣ ಬಣ್ಣ ಬಳಿದು ಹೊಸ ಜೀವ ನೀಡಿದ್ದಾರೆ ಗಣಪತಿ ಗಲ್ಲಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ರಾಮಚಂದ್ರ ಐ ನಾಯ್ಕ್.
ಸರ್ಕಾರದ ವಿದ್ಯಾಗಮ ಯೋಜನೆಯಡಿ 3 ಲಕ್ಷ ರೂ ವೆಚ್ಚದಲ್ಲಿ ವಿದ್ಯಾಲಯ ಕಲಾ ಮಂದಿರ ನಿರ್ಮಿಸಿದ್ದಾರೆ. ಇದರ ಜೊತೆ ಶಾಲೆಯಲ್ಲಿರುವ 3 ಸಾವಿರ ರೂಗೆ ತಮ್ಮ 16 ಸಾವಿರ ರೂ ಸೇರಿಸಿ ಉಳಿದ ದುರಸ್ತಿ ಕಾರ್ಯ ಮಾಡಿಸಿದ್ದಾರೆ.


0 Comments