ಎರಡು ದಿನಗಳ ಕಾಲ ಲಾಕ್ಡೌನ್ ಹೇರಿದ ನಡುವೆಯೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಅತಿ ವೇಗವಾಗಿ ಹೆಚ್ಚುತ್ತಿದೆ.
ಜಿಲ್ಲೆಯಲ್ಲಿ ಇಂದು ಒಟ್ಟು ದಾಖಲೆಯ 403 ಪ್ರಕರಣಗಳು ದಾಖಲಾಗಿದ್ದು ತಾಲ್ಲೂಕುವಾರು ನೋಡಿದಾಗ.
- ಚಿಕ್ಕಮಗಳೂರು 144
- ಶೃಂಗೇರಿ 24
- ಮೂಡಿಗೆರೆ 39
- ಕೊಪ್ಪ 39
- ಎನ್ ಆರ್ ಪುರ 27
- ತರೀಕೆರೆ 104
- ಕಡೂರು 56
ಹೀಗೆ ಒಟ್ಟು 403 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಜಿಲ್ಲೆಯಲ್ಲಿ ಇಂದು 2 ಸಾವು ಸಂಭವಿಸಿದ್ದು, 186 ಜನ ಗುಣಮುಖರಾಗಿದ್ದಾರೆ.
ಈಗಾಗಲೇ ಸರ್ಕಾರ ನಾಳೆಯಿಂದ ಸುಮಾರು 14ದಿನಗಳ ಸಂಪೂರ್ಣ ಲಾಕ್ಡೌನ್ ಹೇರಿದ್ದು, ಜಿಲ್ಲೆಯಲ್ಲಿಯೂ ಅತ್ಯಗತ್ಯ ವಸ್ತುಗಳು ಮಾತ್ರ ದೊರೆಯಲಿದೆ.



0 Comments