ರಾಜ್ಯದ್ಯಂತ 14 ದಿನದ ಲಾಕ್ ಡೌನ್ ಹೇರಿದ ಬಳಿಕ ಜಿಲ್ಲೆಯಲ್ಲಿ ಕೊರೋನಾ ಕೇಸ್ ಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ನಿನ್ನೆ 5 ಸಾವು ಸಂಭವಿಸಿದ್ದಲ್ಲದೆ ಒಟ್ಟು 297 ಪ್ರಕರಣ ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಒಟ್ಟು 242 ಕೇಸ್ ಗಳು ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ.
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು 33
- ಶೃಂಗೇರಿ 02
- ಮೂಡಿಗೆರೆ 07
- ಕೊಪ್ಪ 01
- ಎನ್ ಆರ್ ಪುರ 04
- ತರೀಕೆರೆ 126
- ಕಡೂರು 69
www.newsmalnad.com
ಹೀಗೆ ಒಟ್ಟು 242 ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.
18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ವ್ಯಾಕ್ಸಿನ್ ತೆಗೆದುಕೊಳ್ಳೀ. ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ. ಭಯ ಬೇಡ ಎಚ್ಚರಿಕೆ ಇರಲಿ.



0 Comments