ಖ್ಯಾತ ಜ್ಯೋತಿಷಿ, ನಾಟಕಕಾರ, ಕೊಪ್ಪ ತಾಲೂಕಿನ ಹುಲಿಗರಡಿಯ ಮಹಾಬಲರಾಯರು (75) ವಿಧಿವಶರಾಗಿದ್ದಾರೆ.
ಜ್ಯೋತಿಷಿ, ನಾಟಕಕಾರ, ಚುಟುಕು ಸಾಹಿತ್ಯ ಪ್ರವೀಣರಾಗಿದ್ದ ಹೆಚ್ ಎಲ್ ಮಹಾಬಲ ರಾವ್ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಹುಲಿಗರಡಿಯವರಾಗಿದ್ದ ಮಹಾಬಲ ರಾವ್ ಬೆಂಗಳೂರಿನಲ್ಲಿ ವಾಸವಿದ್ದರು. ಅವರ ಅಂತ್ಯಕ್ರಿಯೆ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತ ಮಹಾಬಲ ರಾವ್ ಪತ್ನಿ, ಮಕ್ಕಳು, ಸಂಬಂಧಿಗಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.


0 Comments