ಕೊರೋನಾ ಭೀತಿಯ ನಡುವೆ ನಡೆಯಬೇಕಿದ್ದ ಪರೀಕ್ಷೆಗಳು ರದ್ದು ಹಾಗೂ ಮುಂದೂಡಲ್ಪಟ್ಟಿದೆ.ದೇಶಾದ್ಯಂತ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಕಾರಣ ಕೇಂದ್ರ  ಶಿಕ್ಷಣ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

ಪ್ರಧಾನಮಂತ್ರಿ ಅವರೊಂದಿಗೆ ನಡೆದ ಸಭೆಯ ಬಳಿಕ ದ್ವಿತೀಯ ಪಿಯುಸಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ ಹಾಗೂ  ಹತ್ತನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸುವ ನಿರ್ಧಾರ ಮಾಡಿದೆ. ದ್ವಿತೀಯ ಪಿಯುಸಿ ತರಗತಿಯ ಸಿ. ಬಿ. ಎಸ್. ಇ ವಿದ್ಯಾರ್ಥಿಗಳ ಪರೀಕ್ಷೆಯ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.

ಹತ್ತನೇ ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ 'ವಸ್ತುನಿಷ್ಠ ಮಾನದಂಡ'ದ ಆಧಾರದ ಮೇಲೆ ತಯಾರಾಗುತ್ತದೆ. ಇದರ ಪ್ರಕಾರ ವಿದ್ಯಾರ್ಥಿಗಳಿಗೆ ತಮಗೆ ನೀಡಿದ ಅಂಕಗಳು ತೃಪ್ತಿದಾಯಕವಾಗದಿದ್ದಲ್ಲಿ ಅನುಕೂಲಕರ ಪರಿಸ್ಥಿತಿಯಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗುತ್ತದೆ.