ಚಿಕ್ಕಮಗಳೂರು ;ಲಿಂಗದಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.ಆರೋಪಿಗಳಿಂದ ಸುಮಾರು 7 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ
ಶಿವಮೊಗ್ಗ ಮೂಲದ ಪ್ರಮೊದ್ ಹಾಗೂ ಕಿರಣ್ ಬಂಧಿತ ಆರೋಪಿಗಳು.ಈ ಆರೋಪಿತರುಗಳು ತಾವು ಬಜಾಜ್ ಪೈನಾನ್ಸ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ, ನಮ್ಮಲ್ಲಿ ಸೀಜ್ ಆದ ಬೈಕ್ ಗಳೆಂದು ಹಾಗೂ ಎರಡು ತಿಂಗಳಲ್ಲಿ ಕ್ಲಿಯರೆನ್ಸ್ ನೀಡುವುದಾಗಿ ಜನರಿಗೆ ನಂಬಿಸಿ ಮಾರಾಟ ಮಾಡಿ ಮೋಸ ಮಾಡಿದ್ದು ಒಟ್ಟು 7 ಲಕ್ಷ ಮೌಲ್ಯದ 5 ಬಜಾಜ್ ಪಲ್ಸರ್ ಬೈಕ್ ಗಳು, 1 ಪ್ಲಾಟಿನಾ ಬೈಕ್ ಮತ್ತು 1 ಬಜಾಜ್ ಸಿಟಿ 100 ಬೈಕ್ ಗಳನ್ನು ಲಿಂಗದಹಳ್ಳಿ, ಬೀರೂರು, ಹೊಸದುರ್ಗ, ಚನ್ನಗಿರಿ ಮತ್ತು ಶಿವಮೊಗ್ಗ ಕಡೆಗಳಲ್ಲಿ ಮಾರಾಟ ಮಾಡಿರುತ್ತಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುತ್ತಾರೆ.




0 Comments