ಕೊರೋನಾ ನಡುವೆಯೇ ಸದ್ದು ಗದ್ದಲದಲ್ಲಿ ನಡೆದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭವಿಷ್ಯ ಭವಿಷ್ಯ ಹೊರಬಿದ್ದಿದ್ದು ಪಟ್ಟಣ ಪಂಚಾಯ್ತಿ ಚುನಾವಣೆಯ ಒಟ್ಟು 15 ಸ್ಥಾನ ಗಳ ಪೈಕಿ ಕಾಂಗ್ರೆಸ್ 9 ಗೆಲುವು ಸಾಧಿಸಿ ಸ್ಪಷ್ಟ ಬಹುಮತ ಗಳಿಸಿ ಜಯಭೇರಿ ಬಾರಿಸಿದರೆ ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ 6 ಕ್ಕೆ ತೃಪ್ತಿ ಪಡಬೇಕಾಗಿದೆ.

ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದು ಈ ಫಲಿತಾಂಶದ ಮುಖೇನ ಆಡಳಿತ ವಿರೋಧಿ ಅಲೆ ವ್ಯಕ್ತವಾದಂತಿದೆ. ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ್ ಗೌಡ ಹಾಗೂ ಸ್ಥಳೀಯ ನಾಯಕರ ರಾಜಕೀಯ ಚಾಣಾಕ್ಷತೆ ಕೆಲಸ ನಿರ್ವಹಿಸಿರುವುದು ಹೊರ ನೋಟಕ್ಕೆ ಕಾಣುತ್ತದೆ. ಹಲವು ವಿರೋಧಗಳ ನಡುವೆ ಇತ್ತೀಚೆಗೆ ಕಾಂಗ್ರೆಸ್ ಸೇರಿದ ಆರ್ ಎಂ ಮಂಜುನಾಥ್ ಗೌಡರ ಪ್ರಭಾವ ಸಹ ಈ ಚುನಾವಣೆ ಮೇಲೆ ಬೀರಿದೆ ಎಂಬುದು ರಾಜಕೀಯ ಪಡಸಾಲೆಯ ಲೆಕ್ಕಾಚಾರ.

ಒಟ್ಟಾರೆ ವಾರ್ಡ್ ವಾರು ಜಯಗಳಿಸಿರುವವರ ವಿವರ ಹೀಗಿದೆ;

ವಾರ್ಡ್ ನಂ.1 - ರಾಘವೇಂದ್ರ ಸೊಪ್ಪುಗುಡ್ಡೆ(ಬಿಜೆಪಿ)

ವಾರ್ಡ್ ನಂ.2 - ಯತಿರಾಜ್ (ಬಿಜೆಪಿ)

ವಾರ್ಡ್ ನಂ.3 - ದತ್ತಣ್ಣ (ಕಾಂಗ್ರೆಸ್)

ವಾರ್ಡ್ ನಂ.4 - ನಮ್ರತ್ (ಕಾಂಗ್ರೆಸ್)

ವಾರ್ಡ್ ನಂ.5 - ಸುಶಿಲಾ ಶೆಟ್ಟಿ (ಕಾಂಗ್ರೆಸ್)

ವಾರ್ಡ್ ನಂ.6 - ಶಬನಮ್ (ಕಾಂಗ್ರೆಸ್)

ವಾರ್ಡ್ ನಂ.7 - ಜೈಯು ಶೆಟ್ಟಿ (ಕಾಂಗ್ರೆಸ್)

ವಾರ್ಡ್ ನಂ. 8 - ಜ್ಯೋತಿ ಗಣೇಶ್ (ಬಿಜೆಪಿ)

ವಾರ್ಡ್ ನಂ.9 - ಸಂದೇಶ ಜವಳಿ (ಬಿಜೆಪಿ)

ವಾರ್ಡ್ ನಂ.10 - ಗಣಪತಿ (ಕಾಂಗ್ರೆಸ್)

ವಾರ್ಡ್ ನಂ. 11 - ಜ್ಯೋತಿ ಮೊಹನ್ (ಬಿಜೆಪಿ)

ವಾರ್ಡ್ ನಂ.12 - ಬಾಬಿ ರವೀಶ್ (ಬಿಜೆಪಿ)

ವಾರ್ಡ್ ನಂ.13 - ಗೀತಾ ರಮೇಶ (ಕಾಂಗ್ರೆಸ್)

ವಾರ್ಡ್ ನಂ.14 - ಮಂಜುಳಾ ನಾಗೇಂದ್ರ (ಕಾಂಗ್ರೆಸ್)

ವಾರ್ಡ್ ನಂ.15 - ಅಸಾದಿ (ಕಾಂಗ್ರೆಸ್).

ಭದ್ರಾವತಿ ನಗರಸಭೆ ಚುನಾವಣಾ ಫಲಿತಾಂಶವೂ ಹೊರಬಿದ್ದಿದ್ದು ಭದ್ರಾವತಿ ಮತದಾರರು ಸಹ ಕಾಂಗ್ರೆಸ್ ಕೈ ಹಿಡಿದಿದ್ದಾರೆ.

ಒಟ್ಟು 34  ವಾರ್ಡ್ ಗಳಲ್ಲಿ

ಕಾಂಗ್ರೆಸ್  18 ವಾರ್ಡ್ ಗಳಲ್ಲಿ ಜಯಗಳಿಸಿ ಗದ್ದುಗೆ ಏರಿದರೆ.

ಜೆಡಿಎಸ್ - 11 ಸೀಟು ಹಾಗೂ

ಬಿಜೆಪಿ - 4 ರಲ್ಲಿ ಜಯಗಳಿಸಿದ್ದು  ಅಧಿಕಾರದ ಗದ್ದುಗೆ ಕಾಂಗ್ರೆಸ್ ಪಾಲಾಗಿದೆ.