ರಾಜ್ಯಾದ್ಯಂತ ನೆನ್ನೆಯಿಂದ 14 ದಿನಗಳ ಅಘೋಷಿತ ಲಾಕ್ಡೌನ್ ಹೇರಿದ್ದು ಈ ಹಿಂದಿನ ವೀಕೆಂಡ್ ಲಾಕ್ಡೌನ್ ಪರಿಣಾಮ ಹಾಗೂ ಕಳೆದ ಗುರುವಾರ ಮದ್ಯಾಹ್ನದಿಂದ ಅಘೋಷಿತ ಲಾಕ್ಡೌನ್ ಹೇರಲಾಗಿತ್ತು. ನಿನ್ನೆ 275 ಪಾಸಿಟಿವ್ ಕೇಸುಗಳು ಜಿಲ್ಲೆಯಲ್ಲಿ ದಾಖಲಾಗಿದ್ದವು.
ಇಂದು ಜಿಲ್ಲೆಯಲ್ಲಿ ಒಟ್ಟು 297 ಕೇಸ್ ಗಳು ಪತ್ತೆಯಾಗಿದ್ದು, 5 ಸಾವು ಸಂಭವಿಸಿದೆ. 154 ಮಂದಿ ಗುಣಮುಖರಾಗಿದ್ದಾರೆ.
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು 161
- ಶೃಂಗೇರಿ 40
- ಮೂಡಿಗೆರೆ 18
- ಕೊಪ್ಪ 22
- ಎನ್ ಆರ್ ಪುರ
- ತರೀಕೆರೆ 31
- ಕಡೂರು 14
www.newsmalnad.com
ಹೀಗೆ ಒಟ್ಟು 297 ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.
18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ವ್ಯಾಕ್ಸಿನ್ ತೆಗೆದುಕೊಳ್ಳೀ. ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ. ಭಯ ಬೇಡ ಎಚ್ಚರಿಕೆ ಇರಲಿ.



0 Comments