ಚಿಕ್ಕಮಗಳೂರು 

ಜಿಲ್ಲಾಡಳಿತದ ಕ್ರಮಕ್ಕೆ ಕ್ಯಾರೆ ಎನ್ನದ ಪ್ರವಾಸಿಗರು, ಚೆಕ್ ಪೋಸ್ಟ್ ನಲ್ಲಿ ಕಿರಿಕ್

ಚಿಕ್ಕಮಗಳೂರು : ರಾಜ್ಯಾದ್ಯಂತ ಕೊರೋನ ಎರಡನೇ ಅಲೆ ಪ್ರಾರಂಭವಾಗಿದೆ, ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲೆಗೆ ಬರುವ ಎಲ್ಲಾ ಪ್ರವಾಸಿಗರಿಗೆ ಮಾಸ್ಕ್ ಧರಿಸಿ ಕೋವಿಡ್ ರಿಪೋರ್ಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು ಆದರೆ ಇದಕ್ಕೆ ಪ್ರವಾಸಿಗರು ಮಾತ್ರ ತಲೆಕೆಡಿಸಿಕೊಳ್ತಿಲ್ಲ. ಮುಳ್ಳಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿ ಮುಂತಾದ ಭಾಗಗಳಿಗೆ ಹೋಗುವ ಪ್ರವಾಸಿಗರಿಗೆ ಕೈಮರ ಬಳಿ ಚೆಕ್ ಪೋಸ್ಟ್ ಸ್ಥಾಪಿಸಿದೆ. ಆದರೆ ಕೆಲ ಪ್ರವಾಸಿಗರು 'ನಾವು ಹಲವಾರು ಬಾರಿ ರಿಪೋರ್ಟ್ ಮಾಡಿಸಿದ್ದೇವೆ ಎಲ್ಲದರಲ್ಲೂ ನೆಗೆಟೀವ್ ಬಂದಿದೆ ಎಂದು ರಿಪೋರ್ಟ್ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ತಪಾಸಣೆ ವೇಳೆ ಪಾಸಿಟೀವ್ ಬಂದವರನ್ನು ಹೋಂ ಐಸೋಲೇಷನ್ ನಲ್ಲಿ ಇರಿಸಲಾಗುತ್ತಿದೆ.

ಕಡೂರಿನಲ್ಲಿ ಐದು ಎಕರೆ ಜಾಗದಲ್ಲಿ ಹೈಟೆಕ್ ಪಾರ್ಕ್! 

ಕಡೂರು : ಕಡೂರಿನಲ್ಲಿ ಈಗ ಹೈಟೆಕ್ ಪಾರ್ಕ್ ನಿರ್ಮಾಣವಾಗಲಿದೆ.ಜಿಟಿಟಿಸಿ ಕಾಲೇಜಿ ಪಕ್ಕದಲ್ಲಿರುವ ಪುರಸಭೆಯ ಸುಮಾರು ಐದು ಎಕರೆ ಜಾಗದಲ್ಲಿ ಈ ಪಾರ್ಕ್ ನಿರ್ಮಾಣವಾಗಲಿದೆ. ಸುಮಾರು ವರ್ಷಗಳಿಂದ ನಿರುಪಯೋಗವಾಗಿದ್ದ ಜಾಗದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ.ಪಾರ್ಕ್ ನಿರ್ಮಾಣಕ್ಕಾಗಿ ಸಮತಟ್ಟು ಮಾಡುವ ಕೆಲಸ ಈಗಾಗಲೇ ಮುಗಿದಿದೆ. ಸುಮಾರು 48 ಲಕ್ಷ ರೂಗಳಲ್ಲಿ ಈ ಯೋಜನೆ ಶುರುವಾಗಲಿದೆ. ಬಿಡುವಿನ ಸಮಯದಲ್ಲಿ ಕುಟುಂಬದ ಜೊತೆ ಸಮಯ ಕಳೆದು ಬರಲು ಒಂದು ಪ್ರಶಾಂತವಾದ ಜಾಗವಿರಬೇಕು ಎಂಬ ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರ ಕನಸು ನನಸಾಗುವ ಸಮಯ ಹತ್ತಿರದಲ್ಲಿದೆ.

 www.newsmalnad.com 

ಶಿವಮೊಗ್ಗ 

ಶಿವಮೊಗ್ಗ ತುಮಕೂರು ಚತುಷ್ಪತ ರಸ್ತೆಗೆ ಕೇಂದ್ರದಿಂದ ಅನುಮೋದನೆ : ಬಿಎಸ್‌ವೈ ಸಂತಸ

ಬೆಂಗಳೂರು : ರಾಷ್ಟ್ರೀಯ ಹೆದ್ದಾರಿ 206ರ ಶಿವಮೊಗ್ಗ ತುಮಕೂರು ನಡುವೆ ಭಾರತ್ ಮಾಲ ಯೋಜನೆ ಅಡಿಯಲ್ಲಿ ಚತುಷ್ಪತ ರಸ್ತೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿರುವ ಕುರಿತು ಮುಖ್ಯಮಂತ್ರಿ ಬಿ. ಎಸ್  ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. 6397.47 ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು ಹಾಗು ಮಲೆನಾಡು ನಡುವಿನ ಮಾರ್ಗ ಇನ್ನಷ್ಟು ಸುಗಮವಾಗಲಿದೆ, ಈ ಯೋಜನೆಗೆ ಅನುಮೋದನೆ ನೀಡಿಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ರುದ್ರಭೂಮಿಗಳ ಕೊರತೆ! 

ಶಿವಮೊಗ್ಗ ;ಶಿವಮೊಗ್ಗದಲ್ಲಿ ಪಾರ್ಥಿವ ಶರೀರಗಳಿಗೆ ಅಂತ್ಯಸಂಸ್ಕಾರ ನಡೆಸುವ ಜಾಗವಾದ ಸ್ಮಶಾನಕ್ಕೆ ಕೊರತೆ ಎದುರಾಗಿದೆ. ಶಿವಮೊಗ್ಗ ಮಹಾನಗರ ಕಾಲಕ್ಕೆ ಅಡಿಯಲ್ಲೇ 22 ಸ್ಮಶಾನಗಳಿದ್ದರೂ ಅದರಲ್ಲಿ ಹೆಚ್ಚಿನ ರುದ್ರಭೂಮಿಗಳು ವಿವಾದದಲ್ಲಿದೆ. ಇನ್ನು ಕೆಲವು ರುದ್ರಭೂಮಿಗಳು ಒತ್ತುವರಿ ಆರೋಪಡಿಯಲ್ಲಿದೆ. ಈ ರುದ್ರಭೂಮಿಗಳ ನಿರ್ವಹಣೆ ಎಂದು ಪಾಲಿಕೆಯಿಂದ ಪ್ರತಿವರ್ಷ 50ಲಕ್ಷದವರೆಗೂ ಅನುದಾನ ನೀಡಲಾಗುತ್ತಿತ್ತು. ಆದರೆ ನಿರ್ವಹಣೆಗಾಗಿ ಖರ್ಚು ಮಾಡುತ್ತಿದ್ದದ್ದು ಸ್ವಲ್ಪವೇ ಸ್ವಲ್ಪ ಹಣ ಎಂದು ವರದಿಯಾಗಿದೆ.

 www.newsmalnad.com 

ಹಾಸನ 

ನಿಲ್ಲುತ್ತಿಲ್ಲ ಜಿಲೆಟಿನ್ ಸ್ಫೋಟಗಳು ;ಹಾಸನದಲ್ಲಿ ಮೃತ್ಯು! 

ಹೊಳೆನರಸೀಪುರ :ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇಂತಹ ಘಟನೆಗಳು ನಿಲ್ಲಬೇಕಾದ ಬದಲು ಪದೇ ಪದೇ ಮರುಕಳಿಸುತ್ತಿದೆ. ಹಾಸನದಲ್ಲಿ ಸ್ಫೋಟಕ ವಸ್ತುವಾದ ಜಿಲೆಟಿನ್ ಸ್ಫೋಟಗೊಂಡು ಒಬ್ಬರ ಮೃತ್ಯುವಾಗಿದೆ. ಬೆಟ್ಟದಹಳ್ಳಿ ಗ್ರಾಮದ ಸಂಪತ್ ಮೃತ ದುರ್ದೈವಿ. ಚಾಕೇನಹಳ್ಳಿಕಟ್ಟೆ ಗ್ರಾಮದಲ್ಲಿ ಸ್ಫೋಟಕ ವಸ್ತುಗಳ ಮಾರಾಟದ ಪರವಾನಗಿ ಹೊಂದಿದ್ದ ನಾಗೇಶ್ ಎಂಬುವವರಿಂದ ಸ್ಫೋಟಕಗಳನ್ನು ತೆಗೆದುಕೊಂಡು ಸಂಪತ್, ರವಿಕುಮಾರ್ ಹಾಗೂ ನಟರಾಜ್ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಜಿಲೆಟಿನ್ ಸ್ಟೋಟಗೊಂಡಿದೆ. ಸಂಪತ್ ಮೃತಪಟ್ಟರೆ, ರವಿಕುಮಾರ್ ಹಾಗೂ ನಟರಾಜ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಎಲ್ಲೆಂದರಲ್ಲಿ ಬೀಳುತ್ತಿದೆ ತ್ಯಾಜ್ಯ ; ಸತ್ತ ಪ್ರಾಣಿಗಳು ತ್ಯಾಜ್ಯವೂ ಕೆರೆಗಳಿಗೆ ಸೇರುತ್ತಿವೆ. 

ಚನ್ನರಾಯಪಟ್ಟಣ : ಪಟ್ಟಣದ ಅಮಾನಿಕೆರೆಯ ಹತ್ತಿರ ತ್ಯಾಜ್ಯಗಳ ರಾಶಿಯೇ ಆಗಿದೆ. ಅಕ್ಕಪಕ್ಕದ ಹೋಟೇಲಿನವರು ಉಳಿದ ತ್ಯಾಜ್ಯಗಳನ್ನೆಲ್ಲಾ ತಂದು ಕರೆಯ ಬಳಿ ಹಾಕುತ್ತಿದ್ದಾರೆ. ಈ ತ್ಯಾಜ್ಯಗಳೆಲ್ಲಾ ಹೋಗಿ ಕೆರೆಯನ್ನೇ ಸೇರುತ್ತಿದೆ ಶ್ರವಣಬೆಳಗೊಳ ರಸ್ತೆಯಲ್ಲಿ ಪಕ್ಕದಲ್ಲಂತೂ ಪ್ಲಾಸ್ಟಿಕ್ ವಸ್ತುಗಳೇ ಬಿದ್ದಿರುತ್ತದೆ.ಕಸ ಹಾಕಿದರೆ ದಂಡ ವಿಧಿಸಲಾಗುತ್ತದೆ ಎಂದು ಗೊತ್ತಿದ್ದರೂ ಸಹ ಅದೇ ಜಾಗದಲ್ಲಿ ಕಸ ಹಾಕುತ್ತಿದ್ದಾರೆ.

 www.newsmalnad.com 

ಉತ್ತರ ಕನ್ನಡ 

ದಿಬ್ಬಕ್ಕೆ ಗುದ್ದಿದ ಬಸ್ ; ಪ್ರಯಾಣಿಕರಿಗೆ ಗಾಯ

ಯಲ್ಲಾಪುರ : ಆರ್ತಿಬೈಲ್ ಘಟ್ಟದ ಬಳ  ಚಾಲಕನ ನಿಯಂತ್ರಣ ತಪ್ಪಿ ಬಸ್ಸು ದಿಬ್ಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಕಳಚೆ ಯಲ್ಲಾಪುರ ಮಾರ್ಗ ಮಧ್ಯೆ ಸಾಗುವಾಗ ಈ ಘಟನೆ ನಡೆದಿದೆ. ಬಸ್ಸಿನಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದರು.ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಕಳಚೆಯಿಂದ ಯಲ್ಲಾಪುರಕ್ಕೆ ಬರುವ ಬಸ್ ನಲ್ಲಿ ಬರುತ್ತಿದ್ದರು.ಸುಮಾರು 12 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸಚಿವರಾದ ಶಿವರಾಮ ಹೆಬ್ಬಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಕ್ಷೇಮವನ್ನು ವಿಚಾರಿಸಿದರು.

ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಟ್ರಕ್ ಪಲ್ಟಿ

ಅಂಕೋಲಾ ; ವಿವಿಧ ಬಗೆಯ ಬ್ರ್ಯಾಂಡ್‌ನ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಒಂದು ಭಾನುವಾರ ಅಂಕೋಲ ತಾಲ್ಲೂಕಿನ ಅಡ್ಲೂರು ಬಳಿ ಪಲ್ಟಿಯಾಗಿದೆ. ಮದ್ಯ ತರುತ್ತಿದ್ದ ಲಾರಿ ಮಹಾರಾಷ್ಟ್ರ ಮೂಲದ್ದಾಗಿದೆ. ಗೋವಾದ ಮದ್ಯವನ್ನು ಹುಬ್ಬಳ್ಳಿಯ ಕಡೆಗೆ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ರಕ್ ನಲ್ಲಿದ್ದ ಚಾಲಕ ಸೇರಿದಂತೆ ಉಳಿದವರೂ ಸಹ ಪರಾರಿಯಾಗಿದ್ದಾರೆ. ಸುಮಾರು 10 ಲಕ್ಷ ಮೌಲ್ಯದ ಮದ್ಯವನ್ನು ಸಾಗಿಸುತ್ತಿದ್ದ ಎಂದು ವರದಿಯಾಗಿದೆ. ಸಿಕ್ಕ ಅವಕಾಶ ಬಳಸಿಕೊಂಡ ಸಾರ್ವಜನಿಕರು ಮದ್ಯದ ಬಾಟಲಿಗಳನ್ನು ಹೊತ್ತೊಯ್ದಿದ್ದಾರೆ.ಉಳಿದ ಮದ್ಯವನ್ನು ಇನ್ನೊಂದು ಲಾರಿಯ ಮೂಲಕ ಪೊಲೀಸ್ ಠಾಣೆಗೆ ಸಾಗಿಸಲಾಗಿದೆ.

 www.newsmalnad.com 

ಕೊಡಗು 

ನೀರಿನ ಘಟಕ ಹಾಗೂ ರಸ್ತೆ ಉದ್ಘಾಟಾಸಿದ ಶಾಸಕ ಕೆ. ಜಿ. ಬೋಪಯ್ಯ 

ವಿರಾಜಪೇಟೆ ; ಕ್ಷೇತ್ರದ ಕೆಂಬ್ಕೊಲಿ ನಿವಾಸಿಗಳಿಗೆ 8 ಲಕ್ಷ ಅನುದಾನದಲ್ಲಿ ನೀರಿನ ಘಟಕ ಹಾಗೂ 5 ಲಕ್ಷದಲ್ಲಿ ಕೆದಮುಳ್ಳೂರು ಹಾಗೂ ಕೊಟ್ಟಚ್ಚಿಯಿಂದ ಬೀಟಿಕಾಡು ರಸ್ತೆ ಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಶಾಸಕರು "ಗ್ರಾಮೀಣ ಭಾಗದಲ್ಲಿರುವ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವಾಗಿ ಮುಗಿಸಲಾಗುತ್ತದೆ. ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸುವುದು" ಎಂದು ಹೇಳಿದರು.

 www.newsmalnad.com