ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಪೊಲೀಸರು ಅಕ್ರಮ ಗಾಂಜಾ ದಂಧೆಯ ವಿರುದ್ಧ ಸಮರಕ್ಕಿಳಿದಿದ್ದಾರೆ. ಇಂದೂ ಮೂರು ಕಡೆ ದಾಳಿ ನಡೆಸಿದ್ದು ಹಲವು ಆರೋಪಿಗಳನ್ನು ಬಂಧಿಸಲಾಗಿದೆ.
ಇಂದು ಮದ್ಯಾಹ್ನ ಕುದುರೆಮುಖ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಂಸೆ ಗ್ರಾಮದ ಸಂಪಾನೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಸುಳಿವಿನ ಮೇಲೆ ದಾಳಿ ಮಾಡಿ ಅಕ್ರಮವಾಗಿ ಬೆಳೆದಿದ್ದ ಒಟ್ಟು 3200 ಗ್ರಾಮ್ ಗಾಂಜಾ ಗಿಡ , ಒಂದು ಎಸ್ ಬಿ ಎಮ್ ಎಲ್ ಬಂದೂಕು ,25 ಸೀಸದ ಗುಂಡು, 25 ಗ್ರಾಮ್ ರಂಜಕ, 30 ಕೇಪುಗಳನ್ನು ಸ್ಥಳದಲ್ಲಿ ವಶಪಡಿಸಿಕೊಂಡು ಕೇಸು ದಾಖಲಿಸಿದ್ದರು.
ಸಂಜೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಹಿರೇಮಗಳೂರು ಗ್ರಾಮದಲ್ಲಿ 04 ಜನ ಕಿರಾತಕರು ಅಕ್ರಮವಾಗಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೋಲಿಸ್ ಅಧಿಕಾರಿ ರಕ್ಷಿತ್ ಎ.ಕೆ ರವರು ಸಿಬ್ಬಂದಿಯೊಂದಿಗೆ ತೆರಳಿ ದಾಳಿ ನಡೆಸಿ ಸುಮಾರು 20,000ರೂ ಬೆಲೆ ಬಾಳುವ 1 ಕೆಜಿ 100 ಗ್ರಾಂ ಗಾಂಜಾ ¸ಸೊಪ್ಪು 02 ಮೋಟರ್ ಬೈಕ್ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.
ಹಾಗೆಯೇ ತರೀಕೆರೆ ತಾಲ್ಲೂಕು, ಗಾಳಿಹಳ್ಳಿ ಕ್ರಾಸ್ ನಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧಿಕಾರಿ ರಕ್ಷಿತ್ ಮತ್ತು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ನಡೆಸಿ 20,000, ರೂ ಬೆಲೆ ಬಾಳುವ 1 ಕೆಜಿ 150 ಗ್ರಾಂ ಗಾಂಜಾ ¸ಸೊಪ್ಪು 02 ಮೋಟರ್ ಬೈಕ್ ಹಾಗೂ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.






0 Comments