ಮೂಡಿಗೆರೆ : ಕೊರೋನಾ ವೈರಸ್ ನಿಂದ ಮೃತಪಟ್ಟ ಸುಮಾರು 65 ವರ್ಷದ ಹಿಂದೂ ಬ್ರಾಹ್ಮಣ ಸಮುದಾಯದ ಇಂದಿರಮ್ಮ ಅವರ ಅಂತ್ಯಸಂಸ್ಕಾರಕ್ಕೆ ತಮ್ಮ ಮಕ್ಕಳು ಬೆಂಗಳೂರಿನಿಂದ ಬಾರದ ಕಾರಣ ಮೂಡಿಗೆರೆಯ ಮುಸ್ಲಿಂ ಯುವಕರು ಅಂತ್ಯಸಂಸ್ಕಾರ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಕೋವಿಡ್ ನಿಂದ ಮೃತರಾದ ಇಂದಿರಮ್ಮ ಅವರ ಮೃತದೇಹವನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸಂಸ್ಥೆಯ ಅಧ್ಯಕ್ಷ ಫಿಶ್ ಮೋನು, ಅಬ್ದುಲ್ ರೆಹಮಾನ್, ಹಸೈನಾರ್ ಅಣ್ಣು, ಬಶೀರ್ ಅವರು ರಂಝಾನ್ ತಿಂಗಳ ಉಪವಾಸದ ಈ ಸಮಯದಲ್ಲಿ ಬೀಜುವಳ್ಳಿಯ ಹಿಂದೂ ರುಧ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.



0 Comments