ಹಾಸನ ;ಹಾಸನದ ನಂದಿಪುರ ಎಸ್ಟೇಟ್ ನಲ್ಲಿ ಬೆಂಗಳೂರು ಹಾಗೂ ವಿವಿಧ ಭಾಗಗಳಿಂದ ಬಂದು ರೇವ್ ಪಾರ್ಟಿ ಮಾಡುತ್ತಿದ್ದವರ ಬಂಧನವಾಗಿದೆ.
ಸುಮಾರು 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪಾರ್ಟಿ ಮಾಡುತ್ತಿದ್ದವರು ಬಹುತೇಕ ಬೆಂಗಳೂರು ಹಾಗೂ ಬೇರೆ ಕಡೆಯಿಂದ ಬಂದವರಿದ್ದರು. ರಾಜ್ಯದಲ್ಲಿ ಕೊರೋನಾ ಕಾರಣ ನೈಟ್ ಕರ್ಫ್ಯೂ ಇರುವುದರಿಂದ ಸುಲಭವಾಗಿ ವಾಹನಗಳನ್ನು ಅಂತರ್ ಜಿಲ್ಲೆ ಸಂಚಾರಕ್ಕೆ ಬಿಡುವುದಿಲ್ಲ. ಆದರೆ ಪಾರ್ಟಿಗೆ ಬರಬೇಕೆಂದೇ ತಮ್ಮ ವಾಹನಗಳ ಮೇಲೆ 'ತುರ್ತು ಸೇವೆ' ಎಂದು ಬರೆದು ಹಾಕಿಕೊಂಡಿದ್ದರು.
ಪಾರ್ಟಿಯಲ್ಲಿ ಗಾಂಜಾ, ಮತ್ತು ಬರುವ ವಸ್ತುಗಳನ್ನು ಬಳಸಿ ಡಿಜೆ ಸೌಂಡ್ ನಲ್ಲಿ ಪಾರ್ಟಿ ಮಾಡುತ್ತಿದ್ದರು. ಇದರ ಖಚಿತ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ದಾಳಿ ನಡೆಸಿ ಮಾದಕ ಪದಾರ್ಥ ಸೇವಿಸಿ ಪಾರ್ಟಿ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ ಹಾಗೂ ಗಾಂಜಾ, ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾರ್ಟಿ ನಡೆಯುತ್ತಿದ್ದ ಎಸ್ಟೇಟ್ ನ ಮಾಲೀಕ ಗಗನ್ ಅವರನ್ನು ಬಂಧಿಸಲಾಗಿದೆ. ಇನ್ನು ಈ ಪಾರ್ಟಿಯನ್ನು ಆಯೋಜಿಸಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ.


0 Comments