ಹಾಸನ
ಜಿಲೆಟಿನ್ ಸ್ಫೋಟ ; ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಕೆ. ಜಿ ಬೋಪಯ್ಯ
ಹೊಳೆನರಸೀಪುರದಲ್ಲಿ ಜಿಲೆಟಿನ್ ಸ್ಫೋಟಗೊಂಡು ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಉಸ್ತುವಾರಿ ಸಚಿವ ಕೆ. ಜಿ ಬೋಪಯ್ಯ ಸಾಂತ್ವನ ಹೇಳಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು ಅಕ್ರಮ ಗಣಿಗಾರಿಕೆಗಳು ಯಾವುದಾದರೂ ಇದ್ದರೆ ತಕ್ಷಣ ಅದನ್ನು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಒಂದು ವೇಳೆ ಪರವಾನಗಿ ಹೊಂದಿರುವ ನಾಗೇಶ್ ತಪ್ಪಿತಸ್ಥನೇ ಆಗಿದ್ದರೆ ಅವನ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು. ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ "ಸರಿಯಾದ ಕ್ರಮದಿಂದ ವಸ್ತುವನ್ನು ಸಾಗಾಟ ಮಾಡದಿದ್ದರಿಂದ ಈ ರೀತಿಯ ಘಟನೆ ಆಗಿದೆ. ಸ್ಫೋಟಕದ ಉಗ್ರಾಣ ಇದ್ದರೆ ಅದನ್ನು ಬೇರೆ ಕಡೆ ಸ್ಥಳಾಂತರಿಸಬೇಕಾಗುತ್ತದೆ" ಎಂದರು
ಶಿವಮೊಗ್ಗ
ಶಿವಮೊಗ್ಗದಲ್ಲಿ ಕೊರೋನ ಸೋಂಕಿಗೆ ವ್ಯಕ್ತಿ ಸಾವು
ರಾಜ್ಯದಲ್ಲಿ ಎರಡನೇ ಹಂತದ ಕೊರೋನ ಅಲೆ ಎದ್ದಿದೆ. ಶಿವಮೊಗ್ಗದಲ್ಲಿ ಕೊರೋನ ಎರಡನೇ ಅಲೆಯ ಪ್ರಭಾವ ಆಗಿದೆ. ಜಿಲ್ಲಾಡಳಿತ ಹೊಸದಾಗಿ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೆಟಿನ್ ನಲ್ಲಿ ಕಡೂರು ಮೂಲದ 62 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ಹರಡಿ ಮೃತಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಇದೆ.
ಚಿಕ್ಕಮಗಳೂರು
ಕಾಳು ಮೆಣಸು ದರ ಏರಿಕೆ, ಕೃಷಿಕರ ಮೊಗದಲ್ಲಿ ಮಂದಹಾಸ.
ಕಾಳುಮೆಣಸು ಈ ಹಿಂದೆ ಕೆಜಿಗೆ 250 ರೂ. ಗಳ ವರೆಗೆ ಮಾರಾಟ ಮೌಲ್ಯವನ್ನು ಕಾಣುತ್ತಿದ್ದ ಸದ್ಯ 388 ರೂ. ಗಳಿಗೆ ಏರಿಕೆ ಕಂಡಿದೆ.ಈ ಹಿಂದೆ ವಿದೇಶಗಳಿಂದ ಭಾರತಕ್ಕೆ ಕಳ್ಳ ಮಾರ್ಗದ ಮೂಲಕ ಬರುತ್ತಿದ್ದ ಕಾಳು ಮೆಣಸುಗಳನ್ನು ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ತಂದಿರುವುದು ಬೆಲೆ ಏರಿಕೆಗೆ ಒಂದು ಕಾರಣವಾಗಿದೆ
ಈ ಹಿಂದೆ ಭಾರತದ ಕಾಳುಮೆಣಸಿನ ಜೊತೆಗೆ ವಿದೇಶಿ ಕಾಳು ಮೆಣಸನ್ನು ಕಲಬೆರಕೆ ಮಾಡಿ ಅದನ್ನು ಪುನಃ ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು.
ಚಿಕ್ಕಮಗಳೂರಿನ ಹಿಂದೂ ಜಾಗೃತಿ ಸೇನೆಯ ನೂತನ ಜಿಲ್ಲಾ ಅಧ್ಯಕ್ಷರ ಘೋಷಣೆ!
ಚಿಕ್ಕಮಗಳೂರಿನ ಜಿಲ್ಲಾ ಹಿಂದೂ ಜಾಗೃತಿ ಸೇನಾ ವತಿಯಿಂದ ನಡೆದ ಪ್ರಥಮ ಬೈಟೆಕ್ ನಲ್ಲಿ ಪುನೀತ್ ಪೂಜಾರಿ ಅವರನ್ನು ಜಿಲ್ಲಾ ಅಧ್ಯಕ್ಷರಾಗಿ ಘೋಷಣೆ ಮಾಡಲಾಗಿದೆ ಎಂದು ಹಿಂದೂ ಜಾಗೃತಿ ಸೇನಾ ಮುಖ್ಯಸ್ಥ ಪ್ರಶಾಂತ್ ಬಂಗೇರ ತಿಳಿಸಿದರು. ಈ ಕುರಿತು ಮಾತನಾಡಿದ ಪ್ರಶಾಂತ್ ಬಂಗೇರಿ, ರಾಜ್ಯಾದ್ಯಂತ ದಿನೇ ದಿನೇ ವ್ಯಾಪಕವಾಗಿ ಅಕ್ರಮ ಗೋ ಸಾಗಾಟ, ಲವ್ ಜಿಹಾದ್ ನಡೆಯುತ್ತಿವೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ನಾವು ನಮ್ಮ ಘಟಕಗಳನ್ನು ತೆರೆದಿದ್ದು ಮುಂದಿನ ದಿನಗಳಲ್ಲಿ ಮಲೆನಾಡಿನ ಎಲ್ಲಾ ಭಾಗಗಳಲ್ಲಿಯೂ ಹಿಂದೂ ಜಾಗೃತಿ ಸೇನೆ ಹಿಂದೂ ಧರ್ಮದ ಪರವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.
ಕೊಡಗು
ಕಾಡಾನೆ ದಾಳಿಗೆ ವೃದ್ಧೆ ಸಾವು
ಕಾಡುಪ್ರಾಣಿಗಳು ನಾಡಿಗೆ ಬಂಧು ದಾಂಧಲೆ ಎಬ್ಬಿಸಿ ಸಾವು ನೋವು ಆಗುವ ಪ್ರಕರಣ ಹೆಚ್ಚುತ್ತಿವೆ. ವಿರಾಜಪೇಟೆಯ ತೂಬಕೊಲ್ಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ 70 ವರ್ಷದ ವೃದ್ಧೆ ಬಲಿಯಾಗಿದ್ದಾರೆ.ರಾತ್ರಿಯ ವೇಳೆ ಮನೆಯಿಂದ ಹೊರಗಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ಕಾಡಾನೆ ದಾಳಿ ನಡೆಸಿದೆ. ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತರಾಗಿದ್ದಾರೆ.


0 Comments